ಕುಂದಾಪುರ ; ಕಳೆದ ಅನೇಕ ತಿಂಗಳಿನಿಂದ 2000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಕಡಿಮೆಯಾಗಿದ್ದು 500 ರ ಮುಖಬೆಲೆಯ ನೋಟುಗಳು ಭಾರಿ ಚಲಾವಣಿಯಲ್ಲಿದ್ದು ಅನೇಕ ಜನರು ಊಹಿಸಿದಂತೆ ಆರ್ ಬಿ ಐ 2000 ಮುಖಬೆಲೆಯ ನೋಟುಗಳನ್ನು ಹಿಂಪೆಡೆಯುದಾಗಿ ಪ್ರಕಟಿಸಿದ್ದು ಜನರ ಊಹೆ ನಿಜವಾಗಿದೆ
ದೇಶದಲ್ಲಿ ಚಲಾವಣೆಯಲ್ಲಿರುವ ಎರಡು ಸಾವಿರ ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆಯನ್ನು ನಿಧಾನವಾಗಿ ಹಿಂಪಡೆಯುವುದಾಗಿ ಶುಕ್ರವಾರ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ ಇದೇ ವೇಳೆ ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಬಹುದು ಇಲ್ಲವೇ ಸಪ್ಟೆಂಬರ್ 30 ರ ಒಳಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಆರ್ ಬಿ ಐ ಹೇಳಿದೆ
ತಕ್ಷಣದಿಂದಲೇ ಜಾರಿಗೆ ಬರುವಂತೆ ಎರಡು ಸಾವಿರ ಮುಖಬೆಲೆ ನೋಟುಗಳ ವಿತರಣೆಯನ್ನು ಸ್ಥಗಿತಗೊಳಿಸುವಂತೆ ಆರ್‌ಬಿಐ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ
ಸಪ್ಟೆಂಬರ್ 30 ರವರೆಗೂ 2,000 ಮುಖಬೆಲೆಯ ಕರೆನ್ಸಿ ನೋಟುಗಳು ಕಾನೂನಾತ್ಮಕವಾಗಿ ಮಾನ್ಯತೆ ಹೊಂದಿರುತ್ತದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ
ಪ್ರಸ್ತುತ ಚಲಾವಣೆಯಲ್ಲಿರುವ 2000 ಮುಖಬೆಲೆಯ ನೋಟುಗಳು ಸಪ್ಟೆಂಬರ್ 30ರ ಕಾಲಮಿತಿ ಒಳಗೆ ಬ್ಯಾಂಕ್ ಗಳನ್ನು ಸೇರಲಿದೆ ಇದು ಆರ್‌ಬಿಐನ ನಿಯಮಿತ ಪ್ರಕ್ರಿಯೆಯಾಗಿದ್ದು ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ