166
ಕುಂದಾಪುರ : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ವತಿಯಿಂದ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ಉದ್ದಕ್ಕೂ ಸಂಚರಿಸುತ್ತಿರುವ ಸೈಕಲ್ ರ‍್ಯಾಲಿ ಇಂದು ಬೆಳಿಗ್ಗೆ 11.00 ಗಂಟೆಗೆ ಕುಂದಾಪುರಕ್ಕೆ ಆಗಮಿಸಲಿದೆ.
ಈ ಸೈಕಲ್ ರ‍್ಯಾಲಿ ಇಂದು ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ಮೊಗವೀರ ಸಭಾಭವನಕ್ಕೆ ಆಗಮಿಸಲಿದ್ದು ರ‍್ಯಾಲಿಯನ್ನು ಸ್ವಾಗತ ಮಾಡುವ ಕಾರ್ಯಕ್ರಮ ಇದೆ ಎಂದು ಸಂಘಟಕರು ತಿಳಿಸಿದ್ದಾರೆ
ಸಿಐಎಸ್‌ಎಫ್ ಯೋಧರು ಭಾರತದ 7,500 ಕಿಮೀ ಕರಾವಳಿಯಲ್ಲಿ ವ್ಯಾಪಾರ, ಆರ್ಥಿಕತೆ ಮತ್ತು ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದರೊಂದಿಗೆ, ಕರಾವಳಿ ಭದ್ರತೆ, ಪ್ರಮುಖ ಬಂದರುಗಳು, ಕಡಲ ಮೂಲ ಸೌಕರ್ಯಗಳನ್ನು ರಕ್ಷಿಸುವುದು ಮತ್ತು ಕರಾವಳಿ ಸಮುದಾಯಗಳಲ್ಲಿ ನಂಬಿಕೆಯನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದಾರೆ

