271
ಕೋಟ : ಪಾಂಡೇಶ್ವರ ಸಾರ್ವಜನಿಕ ಶ್ರೀ ಶಾರದೋತ್ಸವದ ಸಮಿತಿಯ 32ನೇ ವರ್ಷದ ಆಚರಣೆಯ ಪೂರ್ವಭಾವಿ ಸಭೆ ಭಾನುವಾರ ಪಾಂಡೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಮೂರು ದಿನಗಳ ಕಾಲ ಧಾರ್ಮಿಕ, ಸಾಂಸ್ಕ್ರತೀಕ, ಕ್ರೀಡಾ ಕಾರ್ಯಕ್ರಮಗಳು ಮತ್ತು 4ನೇ ದಿನ ಅಂದರೆ ವಿಜಯ ದಶಮಿಯ ದಿನದಂದು ಚಂಡಿಕಾ ಹೊಮ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಮತ್ತು ಸಂಜೆ ಪುರ ಮೆರವಣಿಗೆಯೊಂದಿದೆ ವಿಸರ್ಜನಾ ಮಹೋತ್ಸವ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಚಂದ್ರಮೋಹನ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಗೌರವಧ್ಯಕ್ಷರಾದ ಪ್ರತಾಪ ಶೆಟ್ಟಿ, ಕಾರ್ಯದರ್ಶಿ ದಿನಕರ ಪಾಂಡೇಶ್ವರ ಕೋಶಾಧಿಕಾರಿ ವಿಶ್ವಾನಾಥ ಆಚಾರ್, ಕಲಾ ಕಾರ್ಯದರ್ಶಿ ಶ್ರೀಷಾ ಆಚಾರ್, ಕ್ರೀಡಾ ಕಾರ್ಯದರ್ಶಿ ಪ್ರಮೋದ್ ಪೂಜಾರಿ ಹಾಗೂ ಸಮಿತಿಯ ಉಪಾಧ್ಯಕ್ಷರುಗಳು ಮತ್ತು ಸಮಿತಿಯ ಹಿರಿಯ ಕಿರಿಯ ಸದಸ್ಯರು ಭಾಗವಹಿಸಿದ್ದರು. ರಾಘವೇಂದ್ರ ರಾಜ್ ಸಭೆ ನಿರೂಪಿಸಿ ವಂದಿಸಿದರು

