ಸಾಲಿಗ್ರಾಮ : ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು “ಇಂಪನ” ಹುಟ್ಟೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಕುಂದಾಪುರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿದರು ಕೋಟಾದ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡ್ಗಿಯವರು ಕೋಟ ಎಂಬ ಊರಿನ ಹೆಸರು ಕೇಳಿರದವರು ತುಂಬಾ ಕಡಿಮೆ ಯಾಕೆಂದರೆ ಈ ಊರಿನ ಹೆಸರನ್ನು ಜಗತ್ತಿನಾದ್ಯಂತ ಹೊರಡಿಸಿದ ಮೊದಲ ಕೀರ್ತಿ ಡಾ.ಶಿವರಾಮ ಕಾರಂತರಿಗೆ ಸಲ್ಲಬೇಕು, ಸಾಹಿತ್ಯ ,ನಾಟಕ ,ಯಕ್ಷಗಾನ, ಕಾದಂಬರಿ, ಕಥಾ ಸಂಕಲನ ಆತ್ಮಕಥೆಗಳು ವಿಜ್ಞಾನ ಪತ್ರಿಕಾರಂಗ ಹೀಗೆ ಹೇಳುತ್ತಾ ಹೋದರೆ ಸಮಯ ನಿಲ್ಲದು ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ , ಕಾರಂತರ ಆಸಕ್ತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಪ್ರತಿ ವರ್ಷ ಕಾರಂತ ಹುಟ್ಟೂರು ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಕೋಟ ಜನತೆಯ ಕಾರಂತರ ಬಗೆಗಿನ ಹಂಬಲ ಮತ್ತು ಆಶಯ ಕಾರಂತರ ಥೀಮ್ ಪಾರ್ಕ್ ನ ಮೂಲಕ ಸಾಕಾರಗೊಂಡಿದೆ ಎಂದರು
ಮಾಜಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು ಕಾರ್ಯಕ್ರಮದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಬೈಂದೂರು ಶಾಸಕರಾದ ಗುರುರಾಜ್ ಗಂಟೆಹೊಳೆ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸತೀಶ್ ಕುಂದರ್ ಬಾರಿಕೆರೆ ವಹಿಸಿದ್ದರು ಡಾ!! ಶಿವರಾಮ ಕಾರಂತರ ಪ್ರತಿಷ್ಠಾನ ಕಾರ್ಯಧ್ಯಕ್ಷರಾದ ಆನಂದ.ಸಿ. ಕುಂದರ್ ಹಾಗೂ ನೀಲಾವರ ಸುರೇಂದ್ರ ಅಡಿಗರ ಉಪಸ್ಥಿತಿಯಲ್ಲಿ. ಡಾ!! ಶಿವರಾಮ ಕಾರಂತರ ಜನ್ಮ ದಿನೋತ್ಸವದ ನೆರವೇರಿತು