ಸಾಲಿಗ್ರಾಮ : ಶ್ರೀ ನಟರಾಜ ನೃತ್ಯನಿಕೇತನ ಚಿತ್ರಪಾಡಿ ಸಾಲಿಗ್ರಾಮ ಪ್ರಸ್ತುತ ಪಡಿಸುವ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಇವರ ಸಹಾಯೋಗದೊಂದಿಗೆ 32ನೇ ವರ್ಷದ ವಾರ್ಷಿಕೋತ್ಸವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದುಷಿ ಶ್ರೀಮತಿ ಭಾಗೀರಥಿ.ಎಮ್.ರಾವ್ ಇವರ ನಿರ್ದೇಶನದಲ್ಲಿ ನೃತ್ಯೋಲ್ಲಾಸ- 2025 ಎಂಬ ಕಾರ್ಯಕ್ರಮವು ಸದಾನಂದ ರಂಗಮಂಟಪ ಗುಂಡ್ಮಿ ಸಾಲಿಗ್ರಾಮದಲ್ಲಿ ನಾಳೆ 25/12/2025 ಸಂಜೆ ಗಂಟೆ 5.00ಕ್ಕೆ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜೇಂದ್ರ ಎಸ್ ನಾಯಕ್ ಪ್ರಾಂಶುಪಾಲರು ಲಕ್ಷ್ಮಿ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು ಮಣೂರು ಪಡುಕೆರೆ ಇವರು ವಹಿಸಲ್ಲಿದ್ದು ದೀಪ ಪ್ರಜ್ವಲನೆಯು ಯಕ್ಷಗಾನ ಕಲಾಕೇಂದ್ರ ಇದರ ಕಾರ್ಯದರ್ಶಿಯಾದ ಶ್ರೀ ರಾಜಶೇಖರ್ ಹೆಬ್ಬಾರ್ ನೇರವೆರಿಸಲ್ಲಿದ್ದು. ಅಭ್ಯಾಗತರಾಗಿ ಶ್ರೀಮತಿ ಅಂಜಲಿ ವಿಜಯ್ ಆಡಳಿತ ನಿರ್ದೇಶಕರು ಅಂಜಲೀಸ್ ವಿಜಯಲಕ್ಷ್ಮಿ ಸಾರೀಸ್ ಇವರು ಆಗಮಿಸಲ್ಲಿದ್ದಾರೆ. ನಮ್ಮಿಂದ ಗೌರವ ಸನ್ಮಾನ ಸ್ವೀಕರಿಸಲಿರುವ ಪತ್ರಕರ್ತರು ಮತ್ತು ಸಮಾಜ ಸೇವಕರಾದ ದಿ| ಗಣೇಶ್ ಹೆಗ್ಡೆ ಇವರ ಪರವಾಗಿ ಅವರ ಪುತ್ರಿ ಕುಮಾರಿ ಸಿಂಧು ಜಿ ಹೆಗಡೆ ಕುಂದಾಪುರ ಇವರು ಸ್ವೀಕರಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಪ್ರೀತಿಯಿಂದ ತಮ್ಮೆಲ್ಲರ ಆಗಮ ಬಯಸುತ್ತಿರುವ ಶ್ರೀ ನಟರಾಜ ನೃತ್ಯನಿಕೇತನ ಚಿತ್ರಪಾಡಿ ಸಾಲಿಗ್ರಾಮ ಇದರ ಶಿಷ್ಯವೃಂದದವರು ಮತ್ತು ಎಲ್ಲಾ ಪೋಷಕರು .

