ಪುತ್ತೂರು : ಮೈಮೇಲೆ ಮರದ ದಿಮ್ಮಿ ಬಿದ್ದು ಸುಳ್ಯ ಪಡುವನ್ನರೂ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಕೃಷ್ಣರವರು ಮೃತ ಪಟ್ಟಿದ್ದಾರೆ ಅವರು ಸುಳ್ಯ ಪಡುವನ್ನುರು ಗ್ರಾಮದ ಬಟ್ಟ್ಯಂಗಳ ನಿವಾಸಿಯಾಗಿದ್ದಾರೆ
ಗೋಪಾಲಕೃಷ್ಣ ಅವರು ತನ್ನ ಮನೆಯ ಸಮೀಪ ಇರುವ ಮಾವಿನ ಮರದ ದಿಮ್ಮಿಗಳನ್ನು ಜೆಸಿಬಿ ಮೂಲಕ ಟಿಪ್ಪರ್ ವಾಹನಕ್ಕೆ ಲೋಡ್ ಮಾಡಲಾಗಿತ್ತು ಟಿಪ್ಪರ್ ವಾಹನದ ಹಿಂದಿನ ಬಾಗಿಲನ್ನು ಸರಿಪಡಿಸುವ ಸಂದರ್ಭದಲ್ಲಿ ಮರದ ದಿಮ್ಮಿ ಅಕಸ್ಮಾತ್ತಾಗಿ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡರು ಕೂಡಲೇ ಗೋಪಾಲಕೃಷ್ಣ ಅವರನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆ ತರುವ ವೇಳೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ