ಉಡುಪಿ : ಮಲ್ಪೆ-ಪಡುಕರೆ ನಿವಾಸಿ ಸುರೇಂದ್ರ ಪೂಜಾರಿ ಅವರು ಅಲ್ಪ ಕಾಲದ ಅಸೌಖ್ಯದಿಂದ ಜ.24ರಂದು ಅಂಬಲಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಅವರಿಗೆ 74 ವರ್ಷ ವಯಸ್ಸಾಗಿತ್ತು
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೃದು ಸ್ವಭಾವದ ಸುರೇಂದ್ರ ಪೂಜಾರಿ ಅವರು ಮಲ್ಪೆ-ಪಡುಕರೆಯಲ್ಲಿ ಹೋಟೆಲ್ ವ್ಯವಹಾರವನ್ನು ನಡೆಸುತ್ತಿದ್ದು, ಪ್ರಸಕ್ತ ನಿವೃತ್ತಿ ಜೀವನದಲ್ಲಿದ್ದರು.
ಶ್ರೀ ವೀರಾಂಜನೇಯ ಭಜನಾ ಮಂದಿರ, ಮಲ್ಪೆ-ಪಡುಕರೆ ಇದರ ಗೌರವ ಅರ್ಚಕರಾಗಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿರುವ ಸುರೇಂದ್ರ ಪೂಜಾರಿ ಅವರು ಶ್ರೀ ಬ್ರಹ್ಮಬೈದೇರುಗಳ ಗರೋಡಿ ಕಲ್ಮಾಡಿ ಇದರ ಮಲ್ಪೆ-ಪಡುಕರೆ ಕೂಡುಕಟ್ಟಿನ ಒತ್ತು ಗುರಿಕಾರರಾಗಿ ಸೇವೆ ಸಲ್ಲಿಸಿದ್ದರು ಹಾಗೂ ಶ್ರೀ ಭಗವತಿ ಮಾರಿಗುಡಿ ಕಲ್ಮಾಡಿ ಇದರ ಸಕ್ರಿಯ ಸದಸ್ಯರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ಬಂಧು ವರ್ಗ ಮತ್ತು ಅಪಾರ ಹಿತೈಷಿಗಳನ್ನು ಅಗಲಿದ್ದಾರೆ.