128
ಕೋಟ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಹಾಗೂ ನಿವೃತ್ತ ಶಿಕ್ಷಕ ಮಣೂರು ನಾರಾಯಣ ಮಯ್ಯ ಭಾನುವಾರ ಸ್ವಗೃಹದಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು
ಸಂಘದ ಕಟ್ಟಾ ಸ್ವಯಂಸೇವಕರಾದ ಇವರುನಿವೃತ್ತ ಶಿಕ್ಷಕರಾಗಿ ವಿವಿಧ ಭಾಗಗಳಲ್ಲಿ ಸೇವೆಸಲ್ಲಿಸಿದ ಇವರು, ಹಿರಿಯ ಯೋಗ ಗುರುಗಳಾಗಿ ,ಕೋಟದ ಸೇವಾಸಂಗಮ ಶಿಶುಮಂದಿರದ ಗೌರವಾಧ್ಯಕ್ಷರಾಗಿ ತೆಕ್ಕಟ್ಟೆ ಸೇವಾಸಂಗಮ ವಿದ್ಯಾಕೇಂದ್ರ ಇದರ ಸ್ಥಾಪಕ ಸದಸ್ಯರಾಗಿ ಬ್ರಾಹ್ಮಣ ಮಹಾಸಭಾ ಮಣೂರು ಗ್ರಾಮಪ್ರ ತಿನಿಧಿಯಾಗಿ,ಕೂಟ ಮಹಾಜಗತ್ತು ಅಂಗ ಸಂಸ್ಥೆಯ ಸದಸ್ಯರಾಗಿ,ಮಣೂರು ಭಾಗದ ಹಿರಿಯ ಕೃಷಿಕರಾಗಿ,ಯಕ್ಷಗಾನ ಕಲಾವಿದರಾಗಿ ಹಲವು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.ಇವರು ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಿತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರು,ಸೇವಾಸಂಗಮ ಟ್ರಸ್ಟ್ ವಿಶ್ವಸ್ಥ ಮಂಡಳಿಯವರು ಅತೀವ ಸಂತಾಪ ಸೂಚಿಸಿದ್ದಾರೆ.

