Home » ಪತಿಯ ಸೀಮಂತದ ಸಿದ್ಧತೆಯಲ್ಲಿದ್ದ ಪತಿ ಕುಸಿದು ಬಿದ್ದು ಸಾವು
 

ಪತಿಯ ಸೀಮಂತದ ಸಿದ್ಧತೆಯಲ್ಲಿದ್ದ ಪತಿ ಕುಸಿದು ಬಿದ್ದು ಸಾವು

by Kundapur Xpress
Spread the love

ವಿಟ್ಲ : ಪತ್ನಿಯ ಸೀಮಂತದ ಸಿದ್ಧತೆಯಲ್ಲಿದ್ದ ಪತಿ ಕುಸಿದು ಬಿದ್ದ ಘಟನೆ ವಿಟ್ಲದಲ್ಲಿ ನಡೆದಿದೆ ತಕ್ಷಣ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ  ಮೃತ ಪಟ್ಟಿದ್ದಾರೆ. ಕನ್ಯಾನ ಮತ್ತನಡ್ಕ ಕ್ವಾಟ್ರಸ್ ನಿವಾಸಿ ಪಿಕಪ್ ವಾಹನದ ಚಾಲಕ ಸತೀಶ್ (33) ಮೃತಪಟ್ಟವರಾಗಿದ್ದಾರೆ.ಅವರು ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.

ಹಿಂದು ಸಂಘಟನೆ ಹಾಗೂ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಅವರು ಸಂತೋಷ್ ಬೊಳಿಯಾರ್ ಅವರ ಜತೆಗೆ ಕೆಲಸ ನಿರ್ವಹಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಬೊಳಿಯಾರ್ ಭಾಗದಲ್ಲೇ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಾಗಿದ್ದರು. ಕನ್ಯಾನ ಹಾಲ್ ಒಂದರಲ್ಲಿ ಮೇ 8ರಂದು ಮಧ್ಯಾಹ್ನ ಸೀಮಂತ ನಿಗದಿಯಾಗಿದ್ದು, ಅಂದು ಬೆಳಗ್ಗೆ ಅಲಂಕಾರ ಸೇರಿ ಎಲ್ಲಾ ಕೆಲಸಗಳನ್ನು ನಡೆಸಿ ಮನೆಗೆ ತೆರಳಿದವರು ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಗೆ ವರ್ಗಾವಣೆ ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಎರಡು ವಾರಗಳ ಬಳಿಕ ಮೆದುಳು ನಿಷ್ಕ್ರಿಯಗೊಂಡು ಮೃತರಾಗಿದ್ದಾರೆ.

 

Related Articles

error: Content is protected !!