Home » ಕೆ. ಜಿ. ವೆಂಕಟರಮಣಯ್ಯ ನಿಧನ
 

ಕೆ. ಜಿ. ವೆಂಕಟರಮಣಯ್ಯ ನಿಧನ

by Kundapur Xpress
Spread the love

 ಕುಂದಾಪುರ : ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಖ್ಯಾತ ದಸ್ತಾವೇಜು ಬರಹಗಾರರಾದ ಶ್ರೀ ಕೆ ಜಿ ವೆಂಕಟರಮಣಯ್ಯನವರು ಇಂದು ಮುಂಜಾನೆ ನಿಧನ ಹೊಂದಿದರು ಅವರಿಗೆ 81 ವರ್ಷ ವಯಸ್ಸಾಗಿತ್ತು ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದರು

ಕುಂದಾಪುರ ನಗರದ ಚಿಕ್ಕನಸಾಲು ರಸ್ತೆಯ ನಿವಾಸಿಯಾದ ಅವರು ಕೋರ್ಟ್‌ ಕೆಲಸದಿಂದ ಸ್ವಯಂ ನಿವೃತ್ತಿ ಹೊಂದಿ ಖ್ಯಾತ ದಸ್ತಾವೇಜು ಬರಹಗಾರರಾಗಿ ಗುರುತಿಸಿಕೊಂಡಿದ್ದರು ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಕಾಂಗ್ರೇಸ್‌ ಪಕ್ಷದ ಮೂಂಚೂಣಿ ನಾಯಕರಾಗಿದ್ದರು

ಅವರು ಪತ್ನಿ ಪುತ್ರ ಹಾಗೂ ನಾಲ್ವರು ಪುತ್ರಿಯರು ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ

ಕೆ ಜಿ ವೆಂಕಟರಮಣಯ್ಯನವರ ಮೃತದೇಹವನ್ನು ಚಿಕ್ಕನಸಾಲು ರಸ್ತೆಯ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ 2.30ರ ವೇಳೆಗೆ  ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ

 

Related Articles

error: Content is protected !!