298
ಉಡುಪಿ :ಸಮೀಪದ ಉದ್ಯಾವರದ ಹೊಳೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಒಬ್ಬರು ನದಿಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ವರದಿಯಾಗಿದೆ ಉದ್ಯಾವರದ ಅಂಕುದ್ರುವಿನ ರಾಘು (60 ವರ್ಷ) ಎಂಬವರೇ ಮೃತ ದುರ್ದೈವಿ
ನಿನ್ನೆ ರವಿವಾರ ಮನೆಯ ಬಳಿಯ ಉದ್ಯಾವರದ ಹೊಳೆಯಲ್ಲಿ ಮೀನು ಹಿಡಿಯಲು ಹೋಗಿ ನದಿಯಲ್ಲಿ ಕೊಚ್ಚಿ ಹೋಗಿದ್ದರು ಇಂದು ಅವರ ಮೃತ ದೇಹ ಪತ್ತೆಯಾಗಿದೆ ಮೃತರು ಪತ್ನಿ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ

