208
ಉಡುಪಿ : ಅಂಬಲಪಾಡಿ ಕುಂಜಗುಡ್ಡೆ ಮಹಾದೇವಿ ಲೇಔಟ್ ಪರಿಸರದ ನಿವಾಸಿ ಗೋಪಾಲ್ ಅಮೀನ್ (69 ವರ್ಷ) ರವರು ಡಿ.7ರಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಖಾಸಗಿ ಸೇವೆಯಲ್ಲಿದ್ದ ಗೋಪಾಲ್ ಅಮೀನ್ ರವರು ಸದಾ ಲವಲವಿಕೆಯ ಸರಳ, ಸಜ್ಜನಿಕೆ ಹಾಗೂ ಸ್ನೇಹಮಯ ವ್ಯಕ್ತಿತ್ವದವರಾಗಿದ್ದರು

