ಕುಂದಾಪುರ : ಕುಂದಾಪುರದ ಕುಂದೇಶ್ವರ ದೇವಸ್ಥಾನದ ದೀಪೋತ್ಸವ ಪ್ರಯುಕ್ತ ನ. 30 ಹಾಗೂ ಡಿ.1 ರಂದು ಸಂಜೆ 6 ಗಂಟೆ ನಂತರ ಕುಂದಾಪುರದ ಶಾಸ್ತ್ರಿ ವೃತ್ತದಿಂದ ಹಳೆ ಬಸ್ಸು ನಿಲ್ದಾಣದ ತನಕ ಯಾವುದೇ ವಾಹನಗಳಿಗೆ ಪೇಟೆಯ ಒಳಭಾಗದಲ್ಲಿ ಪ್ರವೇಶವಿರುವುದಿಲ್ಲ. ದೀಪೋತ್ಸವದ ಕಾರ್ಯಕ್ರಮಕ್ಕೆ ಆಗಮಿಸುವ ದ್ವಿಚಕ್ರ ವಾಹನದ ಸವಾರರು ತಮ್ಮ ವಾಹನವನ್ನು ಶಾಸ್ತ್ರಿ ವೃತ್ತದ ಸಮೀಪವಿರುವ ಅಂಡರ್ ಪಾಸ್ ಮೇಲ್ ಸೇತುವೆಯ ಕೆಳಭಾಗದ ಪಾರ್ಕಿಂಗ್‌ನಲ್ಲಿ ನಿಲ್ಲಿಸತಕ್ಕದ್ದು, ಲಘು ಹಾಗೂ ಘನ ವಾಹನಗಳಿಗೆ, ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ ಎಂದು ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ