ಕುಂದಾಪುರ : ತ್ರಾಸಿ ರಾ.ಹೆ. 66ರಲ್ಲಿ ನೂತನವಾಗಿ ನಿರ್ಮಾಣಗೊಂಡ ಧನುಷ್ – ಟವರ್ಸ್ ಹೊಟೇಲ್ ಪಿಜಿಬಿ, ರೆಸಿಡೆನ್ಸಿ ಬೋರ್ಡಿಂಗ್, ಲಾಡ್ಡಿಂಗ್ ಇದರ ಪ್ರವೇಶೋತ್ಸವ ಹಾಗೂ ಉದ್ಘಾಟನ ಸಮಾರಂಭ ನೆರವೇರಿತು.
ಶಿವಮೊಗ್ಗ ಹೊಟೇಲ್ ಶ್ರೀರಾಮ ರೆಸಿಡೆನ್ಸಿ ಮಾಲಕ ಹಾಗೂ ಶಿವಮೊಗ್ಗ ಮಾನಸ ಇಂಟರ್‌ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಎಚ್.ಸುಬ್ಬಯ್ಯರವರು ಉದ್ಘಾಟಿಸಿ ಮಾತನಾಡಿದರುತ್ರಾಸಿ ಬೀಚ್ ಸನಿಹ ಹೊಟೇಲ್, ಲಾಡ್ಡಿಂಗ್ ಉದ್ಯಮದಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದ್ದು ಉದ್ಯೋಗ ಅವಕಾಶಕ್ಕೂ ಸಹಾಯಕವಾಗುತ್ತದೆ ಎಂದು ಶುಭಹಾರೈಸಿದರು. ತ್ರಾಸಿ ಗ್ರಾ.ಪಂ. ಅಧ್ಯಕ್ಷ ಮಿಥುನ ಎಂ.ಡಿ. ಬಿಜೂರು ಅಧ್ಯಕ್ಷತೆ ವಹಿಸಿದ್ದರು
ಹೋಟೆಲ್ ಮಾಲಕರಾದ ಪರಮೇಶ್ವರ ಗಾಣಿಗ ಬಿ. ಸ್ವಾಗತಿಸಿ, ಪ್ರಸ್ತಾವಿಸಿ, ಮುಂಬಯಿ, ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸಿರುವ ಅನುಭವದ ಮೇಲೆ ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ತ್ರಾಸಿಯಲ್ಲಿ ಉದ್ಯಮ ಪ್ರಾರಂಭಿಸ ಲಾಗಿದ್ದು, ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದ್ದೇವೆ ಎಂದರು
ಕುಂದಾಪುರ ಶ್ರೀವೇಣುಗೋಪಾಲಕೃಷ್ಣ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಗಾಣಿಗ, ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ಬಾರ್ಕೂರು ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಡಪಾಡಿ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಸತೀಶ್ ಗಾಣಿಗ ಕುಂದಾಪುರ, ಉದ್ಯಮಿ ಮಧುಕರ ಪೂಜಾರಿ, ಕನ್ಸ್‌ಲೈಂಗ್ ಸಿವಿಲ್ ಎಂಜಿನಿಯರ್ ದಿನೇಶ್ ಹೆಗ್ಡೆ ಶಾಲಿನಿ ಎ. ಗಾಣಿಗ, ಅಭಿನಂದನ ಪಿ. ಗಾಣಿಗ, ಧನುಷ್ ಎ. ಗಾಣಿಗ, ದಾಕ್ಷಾಯಿಣಿ ಉಪಸ್ಥಿತರಿದ್ದರು.
ಬೆಳಗ್ಗೆ ಗಣಪತಿಹೋಮ, ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ ಚಂದ್ರಶೇಖರ ಬಿಜಾಡಿ ಕಾರ್ಯಕ್ರಮ ನಿರೂಪಿಸಿ. ಉಪ್ಪುಂದ ಸುಬ್ರಹ್ಮಣ್ಯ ಜಿ. ಗಾಣಿಗ ವಂದಿಸಿದರು.

