Home » ದೊಡ್ಡಣಗುಡ್ಡೆೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ
 

ದೊಡ್ಡಣಗುಡ್ಡೆೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

ತೋರಣ ಮುಹೂರ್ತ, ಧಾರ್ಮಿಕ ಪ್ರಕ್ರಿಯೆಗೆ ಚಾಲನೆ

by Kundapur Xpress
Spread the love

ಉಡುಪಿ, : ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಕಪಿಲ ಮಹರ್ಷಿಗಳ ಸಾನ್ನಿಧ್ಯವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕುಂಭಾಭಿಷೇಕ ಪೂರ್ವಭಾವಿಯಾಗಿ ಬುಧವಾರ ಧಾರ್ಮಿಕ ಕಾರ್ಯಕ್ರಮಕ್ಕೆೆ ಚಾಲನೆ ನೀಡಲಾಯಿತು.

ಋತ್ವಿಜರ ಆಗಮನ, ಸಾಮೂಹಿಕ ದೇವತಾ ಪ್ರಾರ್ಥನೆ, ಅರಣೀ ಮಥನ, ತೋರಣ, ಉಗ್ರಾಣ ಮುಹೂರ್ತ, ಆಲಯ ಪ್ರತಿಗ್ರಹ, ಆದ್ಯ ಗಣಪತಿಯಾಗ, ನವಗ್ರಹ ಯಾಗ, ಮೃತ್ಯುಂಜಯ ಯಾಗ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ಪಂಚಮೂರ್ತಿ ಆರಾಧನೆ ಸಹಿತ ವಿಪ್ರೋಚ್ಛಿಷ್ಟ, ರತ್ನನ್ಯಾಾಸ, ಭೂವರಾಹ ಮಂತ್ರ ಹೋಮ, ವಾಸ್ತುರಕ್ಷಾಾ ಪ್ರಕ್ರಿಯೆ, ಬಿಂಬ ಶುದ್ಧಿ, ಅಷ್ಟಬಂಧ ಅಧಿವಾಸ, ಪೀಠಾಧಿವಾಸ, ಸಪ್ತಾಧಿವಾಸ ಪೂಜೆ, ಅಷ್ಟಾವಧಾನ ಸೇವೆ ನೆರವೇರಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ


ಇಂದು ಪ್ರತಿಷ್ಠೆೆ
ಮೇ 1ರಂದು ಬೆಳಗ್ಗೆೆ 8.00ಕ್ಕೆೆ ನೂತನ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠೆೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ನೆರವೇರಿತು

 

Related Articles

error: Content is protected !!