97
ಕೋಟ : ಶ್ರೀ ಗುರುನರಸಿಂಹ ದೇವಸ್ಥಾನದ ಗುರುಧಾಮ ವಸತಿ ನಿರ್ಮಾಣ ಕಾರ್ಯಕ್ಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ವತಿಯಿಂದ ದೇಣಿಗೆಯಾಗಿ ರೂಪಾಯಿ ಒಂದು ಲಕ್ಷದ ಒಂದು ನೂರ ಹನ್ನೊಂದರ ಚೆಕ್ಕನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್.ಕಾರಂತರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಪಿ. ಎಲ್. ತುಂಗ, ಕೋಶಾಧಿಕಾರಿ ಪರಶುರಾಮ ಭಟ್, ಮಾಜಿ ಅಧ್ಯಕ್ಷ ಐರೋಡಿ ಜಗದೀಶ ಕಾರಂತ, ಅಂಗಸAಸ್ಥೆಯ ಅಧ್ಯಕ್ಷ ಪಿ.ಸಿ ಹೊಳ್ಳ, ಸಿ. ಸುರೇಶ ತುಂಗ, ಮಂಜುನಾಥ ಉಪಾಧ್ಯ, ಕೆ ತಾರಾನಾಥ ಹೊಳ್ಳ , ಕೃಷ್ಣ ಹೆಬ್ಬಾರ್, ಪಿ ರಾಜೇಶ್ ಉಪಾಧ್ಯ, ಮಹಾಬಲ ಹೇರ್ಳೆ ಮುಂತಾದವರು ಉಪಸ್ಥಿತರಿದ್ದರು

