ಕುಂದಾಪುರ : ನಗರದ ಪಡುಕೇರಿಯ ನಿವಾಸಿಯಾದ ಶ್ರೀಯುತ ಸಂತೋಷ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆರ್ಥಿಕವಾಗಿಯೂ ತೊಂದರೆಯಲ್ಲಿದ್ದದ್ದನ್ನು ಮನಗಂಡ ನಗರದ ಪಡುಕೇರಿಯ ಯುವ ಮಿತ್ರ ವೃಂದದ ವತಿಯಿಂದ ಅವರಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಯಿತು
ಯುವ ಮಿತ್ರ ವೃಂದದ ಅಧ್ಯಕ್ಷರಾದ ಶ್ರೀ ಅಮರ್ ಕುಮಾರ್ ಅವರ ನೇತೃತ್ವದಲ್ಲಿ ಯುವ ಮಿತ್ರ ವೃಂದದ ಸದಸ್ಯರು ಮತ್ತು ಇತರ ಸ್ಥಳೀಯ ದಾನಿಗಳ ನೆರವಿನಿಂದ ಶ್ರೀ ಸಂತೋಷ್ ಅವರ ಕುಟುಂಬಕ್ಕೆ 42,500 ರೂಪಾಯಿಗಳನ್ನು ಸಂಗ್ರಹಿಸಿ ದಿನಾಂಕ 03/11/2024 ರ ಆದಿತ್ಯವಾರದಂದು ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನದ ವಠಾರದಲ್ಲಿ ವಿತರಿಸಲಾಯಿತು
ಯುವ ಮಿತ್ರ ವೃಂದದ ಪರವಾಗಿ ದಿನೇಶ್ ಪ್ರಿಂಟರ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಇದರ ಮಾಲಕರಾದ ದಿನೇಶ್ ಕೆ ಮತ್ತು ಲೆಕ್ಕ ಪರಿಶೋಧಕರಾದ ಶ್ರೀ ಕಿರಣ್ ಕುಮಾರ್ ರವರು ಜಂಟಿಯಾಗಿ ಚೆಕ್ ನ್ನು ಶ್ರೀ ಸಂತೋಷ್ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಯುವ ಮಿತ್ರ ವೃಂದದ ಅಧ್ಯಕ್ಷರಾದ ಶ್ರೀ ಅಮರ್ ಕುಮಾರ್, ಕಾರ್ಯದರ್ಶಿ ಶ್ರೀ ಮಹೇಶ್ ಅಲ್ಲದೆ ಇತರ ಪಧಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಶ್ರೀ ಅಮರ್ ಕುಮಾರ್ ಅವರು ಮಾತನಾಡಿ ಶ್ರೀ ಸಂತೋಷ್ ಅವರು ಅರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸಿ ನೆರವು ನೀಡಿದ ಎಲ್ಲಾ ದಾನಿಗಳಿಗೂ ಧನ್ಯವಾದವನ್ನು ಸಮರ್ಪಿಸಿದರು.
ಶ್ರೀ ಸುನಿಲ್ ಕೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.