ಕುಂದಾಪುರ: ನಗರದ ಬರೆಕಟ್ಟು ರಸ್ತೆಯಲ್ಲಿ ಕುಡಿಯುವ ನೀರು ಚರಂಡಿ ಪಾಲು ಎಂಬ ಶೀರ್ಷಿಕೆ ಅಡಿಯಲ್ಲಿ ಕುಂದಾಪ್ರ ಎಕ್ಸ್ ಪ್ರೆಸ್ ಸಾಮಾಜಿಕ ಜಾಲತಾಣದ ಸುದ್ದಿ ಪತ್ರಿಕೆಯಲ್ಲಿ ವರದಿ ಪ್ರಕಟವಾದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ 15 ದಿನಗಳಿಂದ ಪೋಲಾಗುತ್ತಿದ್ದ ನೀರನ್ನು ತಡೆಹಿಡಿದು ದುರಸ್ತಿಪಡಿಸಿದ್ದಾರೆ ಆದರೆ ರಸ್ತೆಯ ಮೇಲೆ ನೀರು ಹರಿದಿದ್ದರಿಂದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಕಾರ್ಯ ಇನ್ನಷ್ಟೇ ನಡೆಯಬೇಕಾಗಿದ್ದು ರಸ್ತೆಯ ಡಾಮರೀಕರಣದ ಬಗ್ಗೆ ಕುಂದಾಪುರ ಪುರಸಭೆಯ ಅಧಿಕಾರಿಗಳು ಗಮನಹರಿಸಬೇಕಾಗಿದೆ