ಕುಂದಾಪುರ : ಕುಂದಾಪುರ ನಗರದ ಫಿಶ್ ಮಾರ್ಕೆಟ್ ರಸ್ತೆಯು ಇದೀಗ ಮತ್ತೊಮ್ಮೆ ವಾಸನೆಗಳ ಆಗರವಾಗಿ ಪರಿಣಮಿಸುತ್ತಿದೆ ಹಲವು ದಶಕಗಳ ಹಿಂದೆ ಫಿಶ್ ಮಾರ್ಕೇಟ್ ಪರಿಸರದಲ್ಲಿ ನಡೆದಾಡುವಾಗ ಮೂಗು ಮುಚ್ಚಿಕೊಂಡೆ ನಡೆದಾಡಬೇಕಿತ್ತು ಆದರೆ ಕೆಲವು ಸಮಯಗಳಿಂದ ವಾಸನೆಯು ಸ್ವಲ್ಪ ಸುಧಾರಿಸಿದ್ದು ಇದೀಗ ಮತ್ತೋಮ್ಮೆ ತ್ಯಾಜ್ಯ ಸಂಗ್ರಹದಿಂದ ವಾಸನೆಯ ಕೊಂಪೆಯಾಗಿದ್ದು ಪರಿಸರದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ
ಮೀನು ಮಾರ್ಕೆಟ್ ನ ಪಕ್ಕದ ಭವಾನಿ ಟೆಕ್ಸ್ ಟೈಲ್ಸ್ ಪಕ್ಕದ ಖಾಲಿ ಜಾಗದಲ್ಲಿ ಮೀನಿನ ಸಾಗಾಟಕ್ಕೆ ಬಳಸುವ ಬೆಂಡ್ ಬಾಕ್ಸ್ ಗಳು ಪ್ಲಾಸ್ಟಿಕ್ ಬಾಟಲಿಗಳು ಪ್ಲಾಸ್ಟಿಕ್ ಚೀಲಗಳು ಕೋಳಿ ತ್ಯಾಜ್ಯಗಳು ಹಾಗೂ ಕೋಳಿ ಹಿಕ್ಕಿಗಳ ಆಗರದ ಕೊಂಪೆಯಾಗಿದ್ದು ವಾಸನೆ ಬರುತ್ತಿದೆ ಕಿರಿದಾದ ಈ ರಸ್ತೆಯಲ್ಲಿ ತ್ಯಾಜ್ಯಗಳ ಸಂಗ್ರಹದಿಂದ ಆಗಾಗ ಟ್ರಾಫಿಕ್ ಜಾಮ್ ಗಳು ಉಂಟಾಗುತ್ತಿದ್ದು ಈ ಕಿರಿದಾದ ರಸ್ತೆಯಲ್ಲಿ ನಡೆದಾಡುವ ವಿದ್ಯಾರ್ಥಿಗಳು ಹಿರಿಯ ನಾಗರಿಕರು ಮತ್ತು ಸಾರ್ವಜನಿಕರಿಗೆ ತೀವ್ರ ತರಹದ ತೊಂದರೆಯಾಗುತ್ತಿದ್ದು ಈ ಬಗ್ಗೆ ಕುಂದಾಪುರ ಪುರಸಭೆ ತುರ್ತು ಗಮನ ಹರಿಸಬೇಕಾಗಿದೆ
ಸ್ವಚ್ಛ ಕುಂದಾಪುರ ಸುಂದರ ಕುಂದಾಪುರ ಎನ್ನುವುದು ಬರಿ ನಾಮ ಫಲಕಕ್ಕೆ ಸೀಮಿತವಾಗದೆ ಸ್ವಚ್ಛ ಮತ್ತು ಸುಂದರ ಕುಂದಾಪುರಕ್ಕೆ ಸಂಬಂಧಿಸಿದ ಕೆಲಸಗಳು ಅತಿ ಶೀಘ್ರವಾಗಿ ಕಾರ್ಯರೂಪಕ್ಕೆ ಬರಬೇಕಾದ ಅನಿವಾರ್ಯತೆ ಉಂಟಾಗಿದೆ ಆದಷ್ಟು ಬೇಗ ಖಾಲಿ ಜಾಗದಲ್ಲಿ ಹಾಕಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ಸುಂದರ ಕುಂದಾಪುರಕ್ಕೊಂದು ಮೆರುಗು ನೀಡಬೇಕೆಂದು ಎಂದು ಫಿಶ್ ಮಾರ್ಕೆಟ್ ನಿವಾಸಿಗಳು ಕುಂದಾಪುರ ಪುರಸಭೆ ಅಧಿಕಾರಿಗಳಿಗೆ ಆಗ್ರಪಡಿಸಿದ್ದಾರೆ ತಕ್ಷಣ ಖಾಲಿ ಜಾಗದಲ್ಲಿ ಹಾಕಿದ್ದ ತ್ಯಾಜ್ಯವನ್ನು ತೆರವುಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನೆಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ
ಕೆ ಗಣೇಶ್ ಹೆಗ್ಡೆ, ಕುಂದಾಪುರ