Home » ನಕಲಿ ಮದ್ಯ ತಯಾರಿ : ಅಬಕಾರಿ ಅಧಿಕಾರಿಗಳು ದಾಳಿ
 

ನಕಲಿ ಮದ್ಯ ತಯಾರಿ : ಅಬಕಾರಿ ಅಧಿಕಾರಿಗಳು ದಾಳಿ

by Kundapur Xpress
Spread the love

ಮಂಗಳೂರು : ನಗರದ ಕದ್ರಿ ಲೋಬೊ ಲೇನ್‌ನಲ್ಲಿ ನಕಲಿ ಮದ್ಯ ತಯಾರಿಕಾ ಅಡ್ಡೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 5,57,690 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಮೈಕಲ್ ಬೈಸ್ ಮಿನೇಜಸ್ ಎಂಬಾತನ ಮನೆಯಲ್ಲಿ ನಕಲಿ ಮದ್ಯ ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ

ಮೈಕಲ್ ಬೈಸ್ ಮಿನೇಜಸ್‌ನ ಮನೆಯಲ್ಲಿ ತಯಾರಿಸಿಟ್ಟಿದ್ದ ನಕಲಿ ವೈನ್ – 238.500 ಲೀಟರ್, ವೈನ್ ತಯಾರಿಸುವ ಕೊಳೆ -1,500 ಲೀಟರ್, ಮದ್ಯ – 3.180 ಲೀಟರ್, ನಕಲಿ ವೈನ್ ತಯಾರಿಸುವ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ

ಮಂಗಳೂರು ದಕ್ಷಿಣ ವಲಯ -1 ಕಚೇರಿಯ ಅಬಕಾರಿ ಉಪ ನಿರೀಕ್ಷಕರಾದ ಹರೀಶ್ ಪಿ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

Related Articles

error: Content is protected !!