ತ್ರಾಸಿ : ಒಳ್ಳೆಯ ಮನಸ್ಸಿನಿಂದ ಮಾಡುವ ಎಲ್ಲಾ ಕಾರ್ಯಗಳು ಶುಭವನ್ನು ತರುತ್ತದೆ. ಸಂಸ್ಥೆಯೊಂದು ಹುಟ್ಟಿದರೆ ಅದು ಹತ್ತಾರು ಕುಟುಂಬಗಳಿಗೆ ಬೆಳಕು ನೀಡುತ್ತದೆ. ಈ ನಿಟ್ಟಿನಲ್ಲಿ ಇಂದು ಶುಭಾರಂಭಗೊಂಡ ದ್ವಾರಕಾ ಫ್ಯಾಮಿಲಿ ರೆಸ್ಟೋರಂಟ್ ಈ ಸಂಸ್ಥೆ ಹಲವಾರು ಕುಟುಂಬಗಳಿಗೆ ಉದ್ಯೋಗ ನೀಡುವುದರೊಂದಿಗೆ ಆಧಾರವಾಗಿದೆ. ಒಳ್ಳೆಯ ಸೇವೆ ನೀಡುವುದರ ಮೂಲಕ ಕರಾವಳಿ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸಲಿ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಂಸ್ಥೆ ಪರ ಊರಿನಲ್ಲಿಯೂ ಕೂಡ ಸೇವೆ ನೀಡುವಂತಾಗಲಿ ಎಂದು ವಿಧ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಹೇಳಿದರು.
ಸೆ.12 ರಂದು ಧನುಷ್ ಟವರ್ಸ್ ಪಿಜಿಬಿ ಬೀಚ್ ರೆಸಿಡೆನ್ಸಿ ಬೋರ್ಡಿಂಗ್ & ಲಾಡ್ಜಿಂಗ್ ದ್ವಾರಕ ಹವಾನಿಯಂತ್ರಿತ ಫ್ಯಾಮಿಲಿ ರೆಸ್ಟೋರೆಂಟ್ & ಬಾರ್ ಉದ್ಘಾಟಿಸಿ ಮಾತನಾಡಿದರು
ಮುಖ್ಯ ಅತಿಥಿಗಳಾಗಿ ಗಂಗೊಳ್ಳಿ ಸಬ್ ಇನ್ಸ್‍ಪೆಕ್ಟರ್ ಬಸವರಾಜ್ ಕಾನ್ ಶೆಟ್ಟಿ ಉಪಸ್ಥಿತರಿದ್ದರು. ಧನುಷ್ ಟವರ್ ಬೋರ್ಡಿಂಗ್ & ಲಾಡ್ಜಿಂಗ್ ತ್ರಾಸಿ ಇದರ ಪ್ರೊಪ್ರಾೈಟರ್ ಪರಮೇಶ್ವರ ಗಾಣಿಗ, ಮುಂಬೈ ಉದ್ಯಮಿ ಮಧುಕರ ಪೂಜಾರಿ, ಹಿರಿಯರಾದ ಹೆರಿಯ ಬಿಲ್ಲವ, ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿಥುನ್ ಎಂ.ಡಿ ಬಿಜೂರು ನಾಗರಾಜ್ ಉಪಸ್ಥಿತರಿದ್ದರು. ಭವ್ಯ ಗಿರೀಶ್ ಶೆಟ್ಟಿ ಪ್ರಾರ್ಥಿಸಿದರು. ಪಾಲುದಾರರಾದ ದಯಾನಂದ ಶ್ರೀಯಾನ್ ಮುಳ್ಳಿಕಟ್ಟೆ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿ ವಂದಿಸಿದರು.