ನವದೆಹಲಿ: ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಮಾ. 14 ರಗುರುವಾರ ಅಥವಾ ಮಾ 15 ಶುಕ್ರವಾರ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಚುನಾವಣೆ ಸಿದ್ಧತೆ ಪರಿಶೀಲಿಸಲು ಚುನಾವಣಾ ಆಯೋಗ ಸೋಮವಾರದಿಂದ ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡುತ್ತಿದೆ. ಬುಧವಾರ ಅಲ್ಲಿಂದ ವಾಪಸಾಗಲಿದೆ.ಗುರುವಾರ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಇಂಬು ನೀಡುವಂತೆ ಬುಧವಾರದೊಳಗೆ ವಿವಿಧ ಉದ್ಘಾಟನೆ. ಶಂಕು ಸ್ಥಾಪನೆ ಮುಂತಾದ ಕಾರ್ಯಕ್ರಮಗಳನ್ನು ಮುಗಿಸಲು ಕೇಂದ್ರ ವಿವಿಧ ಸಚಿವಲಯಗಳು ಪ್ರಯತ್ನಿಸುತ್ತಿದೆ ವರದಿಗಳು ತಿಳಿಸಿವೆ.