Home » ಚುನಾವಣಾ ಪೂರ್ವಭಾವಿ ಸಭೆ : ಶಾಸಕ ಕೊಡ್ಗಿ ಭಾಗಿ
 

ಚುನಾವಣಾ ಪೂರ್ವಭಾವಿ ಸಭೆ : ಶಾಸಕ ಕೊಡ್ಗಿ ಭಾಗಿ

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

by Kundapur Xpress
Spread the love

ಕುಂದಾಪುರ : ಕುಂದಾಪುರ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯ ಪೂರ್ವಭಾವಿ ಸಭೆ ನಡೆಯಿತು
ರಾಜ್ಯದ ಪ್ರತಿಷ್ಠಿತ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಸಹಕಾರ ಭಾರತೀಯ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರಾತಿನಿಧ್ಯ ಕೊಟ್ಟು ಈ ಬಾರಿ ಹೊಸ ಉತ್ಸಾಹಿ ಹೈನುಗಾರರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿದ್ದೇವೆ

ಕುಂದಾಪುರ ಉಪವಿಭಾಗ ಕ್ಷೇತ್ರದ 7 ಸಾಮಾನ್ಯ ಸ್ಥಾನಗಳಿಗೆ ಅಭ್ಯರ್ಥಿಯಾಗಿ ಕುಂದಾಪುರ ತಾಲೂಕಿನಿಂದ ಕಾಡೂರ ಸುರೇಶ್ ಶೆಟ್ಟಿ ಬೈಂದೂರು ತಾಲೂಕಿನಿಂದ ಸುಬ್ಬಣ್ಣಶೆಟ್ಟಿ  ಟಿ.ವಿ ಪ್ರಾಣೇಶ್ ಯಡಿಯಾಳ್ ಹಾಗೂ ಕಾರ್ಕಳ ತಾಲೂಕಿನಿಂದ ಕೆ ಮೋಹನ್ ದಾಸ್ ಅಡ್ಯಾoತಾಯ, ಹೆಬ್ರಿ ತಾಲೂಕಿನಿಂದ ಭೋಜಪೂಜಾರಿ, ಕಾಪುಯಿಂದ ಅಶೋಕ್ ರಾವ್, ಉಡುಪಿಯಿಂದ ಹೆರ್ಗ ದಿನಕರ್ ಶೆಟ್ಟಿ ಮತ್ತುಉಡುಪಿ ಜಿಲ್ಲೆಯ ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿ ಬ್ರಹ್ಮಾವರ ತಾಲೂಕಿನ ಶ್ರೀಮತಿ ಶಾಂತ ಎಸ್ ಭಟ್ ರವರು ಸ್ಪರ್ಧಿಸುತ್ತಿದ್ದಾರೆ

ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಉಡುಪಿ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಎಲ್ಲಾ 325 ಅಭ್ಯರ್ಥಿಗಳನ್ನು ಭೇಟಿಯಾಗಿ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಸಕ್ರಿಯವಾಗಿ ತೊಡಗಿಸಿಕೊಂಡು ಅಭ್ಯರ್ಥಿ ಗೆಲುವಿಗೆ ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿಯವರು ಪ್ರಸ್ತಾವಿಕ ಮಾತುಗಳನ್ನಾಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು, ಸುಧೀರ್ ಕೆ.ಎಸ್. ವಂದಿಸಿದರು.
ವೇದಿಕೆಯಲ್ಲಿ ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಕಾಡೂರು ಸುರೇಶ್ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಪ್ರಾಣೇಶ್ ಯಡಿಯಾಳ ರವರು ಉಪಸ್ಥಿತರಿದ್ದರು.

 

Related Articles

error: Content is protected !!