ಸುಣ್ಣಾರಿ : ಹದಿಹರೆಯದ ಮಕ್ಕಳಲ್ಲಿ ಹಾರ್ಮೋನುಗಳ ಪ್ರಭಾವದಿಂದ ಮಾನಸಿಕ ಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಯ ಸಂದರ್ಭದಲ್ಲಿ ಪೋಷಕರು ಇದರ ಸೂಕ್ಷತೆಯನ್ನು ಅರಿತುಕೊಳ್ಳುವ ಮೂಲಕ ತಮ್ಮ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರಾಗಿರಬೇಕೆಂದು ಎ.ವಿ ಬಾಳಿಗ ಮೆಮೊರಿಯಲ್ ಹಾಸ್ಪಿಟಲ್ ಉಡುಪಿ ಇದರ ನಿರ್ಧೇಶಕರಾದ ಡಾ. ಪಿ ವಿ ಭಂಡಾರಿ ಅವರ ಮಾರ್ಗದರ್ಶನದಲ್ಲಿ 10 ವರ್ಷಗಳ ಕಾಲ ನುರಿತ ಅನುಭವ ಹೊಂದಿರುವ, ಕೌನ್ಸಿಲಿಂಗ್ ಸೆಂಟರ್, ಅಚ್ಲಾಡಿ-ಉಡುಪಿ ಇಲ್ಲಿನ ಖ್ಯಾತ ಮನಶ್ಯಾಸ್ತ್ರಜ್ಞರಾದ ಗಿರೀಶ್ ಎಂ.ಎನ್. ಸಲಹೆ ನೀಡಿದರು.
ಅವರು ಎಕ್ಸಲೆಂಟ್ ಸುಣ್ಣಾರಿಯ ಆಡಿಟೋರಿಯಂನಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಪಾಲಕರ – ಶಿಕ್ಷಕರ ಸಭೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಪ್ರತ್ಯೇಕ ಸಂವಾದ ನಡೆಸಿ ಮಾತನಾಡಿದರು. ವಿದ್ಯಾರ್ಥಿಗಳು ಹದಿಹರೆಯದಲ್ಲಿ ಎದುರಾಗುವ ಗೊಂದಲಗಳಿಂದ ಹೊರಬರುವ ಮತ್ತು ಓದಿನಲ್ಲಿ ಗಮನ ಕೇಂದ್ರಿಕರಿಸುವ ಮಾರ್ಗಗಳನ್ನು ತಿಳಿಸಿಕೊಟ್ಟರು.
ಹದಿಹರೆಯದ ಮಕ್ಕಳೊಂದಿಗೆ ಸ್ನೇಹಿತರಂತಿದ್ದು,ಅವರ ಮಾತುಗಳಿಗೆ ಕಿವಿಯಾಗಿ,ಸಮಸ್ಯೆಯ ಪರಿಹಾರದ ಭಾಗವಾಗುವಲ್ಲಿ ಪೋಷಕರ ಪಾತ್ರದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಎಂ.ಎಂ. ಹೆಗ್ಡೆ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ದೀಪಾ ಎಂ. ಹೆಗ್ಡೆ, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರೋಜಿನಿ ಪಿ ಆಚಾಯð ಉಪಸ್ಥಿತರಿದ್ದರು.
ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಜಯಪ್ರಧಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಉಷಾಲತಾ ಸ್ವಾಗತಿಸಿ, ಶ್ರೀಮತಿ ಶಿಲ್ಪಾರಾಣಿ ವಂದಿಸಿದರು.

