ಕುಂದಾಪುರ : ಸುಣ್ಣಾರಿಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಎಂ ಎಂ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ ಅವರು 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮವಾಲು ಎನ್ನುವ ತತ್ವ ನಮ್ಮ ಸಂವಿಧಾನದಿಂದ ಬಂದಿದೆ
ಪ್ರತಿಯೊಬ್ಬರನ್ನು ಕೂಡ ಗೌರವದಿಂದ ನೋಡುದರ ಜೊತೆಗೆ ನಾವೆಲ್ಲ ಒಂದೇ ಅನ್ನುವ ಭಾವನೆ ನಮ್ಮಲ್ಲಿ ಇರಬೇಕು ಈ ದೇಶ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ಮಾಡುವುದು ನಮ್ಮ ಭಾವಿ ಜನಾಂಗವಾದ ನಿಮ್ಮ ಮೇಲೆ ಇದೆ ಎಂದು ನೆರೆದಿರುವಂತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಸ್ವಾಗತಿಸಿದರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸರೋಜಿನಿ ಪಿ ಆಚಾರ್ಯ 76ನೇ ಗಣರಾಜ್ಯೋತ್ಸವಕ್ಕೆ ಶುಭ ಕೋರಿದರು ಹಾಗೆ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕ ಹಾಗೂ ಶಿಕ್ಷಕೇತರ ಬಳಗದವರು ಉಪಸ್ಥಿತರಿದ್ದರು ದೈಹಿಕ ಶಿಕ್ಷಕರಾದ ನಾರಾಯಣ್ ಶೆಟ್ಟಿ ಕೊನೆಯಲ್ಲಿ ಧನ್ಯವಾದಗಳು ಅರ್ಪಿಸಿದರು.