Home » ಎಕ್ಸಲೆಂಟ್ ಕುಂದಾಪುರ : ಕಾನೂನು ಅರಿವು ಮತ್ತು ನಶಾ ಮುಕ್ತ ಭಾರತ ಕುರಿತು ಕಾರ್ಯಗಾರ
 

ಎಕ್ಸಲೆಂಟ್ ಕುಂದಾಪುರ : ಕಾನೂನು ಅರಿವು ಮತ್ತು ನಶಾ ಮುಕ್ತ ಭಾರತ ಕುರಿತು ಕಾರ್ಯಗಾರ

by Kundapur Xpress
Spread the love

ಸುಣ್ಣಾರಿ : ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಹಾಗೂ ಹೈಸ್ಕೂಲ್ ಇದರ ಆಶ್ರಯದಲ್ಲಿ ಕಾನೂನು ಅರಿವು ಮತ್ತು ನಶಾ ಮುಕ್ತ ಭಾರತ ಎನ್ನುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈಗಿನ ಯುವ ಪೀಳಿಗೆಯು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಬಾರದು ಎನ್ನುವ ನಿಟ್ಟಿನಲ್ಲಿ ಕೋಟ ಪೋಲಿಸ್ ಠಾಣೆಯ ಸಬ್ ಇನ್ಸಪೆಕ್ಟರ್ ಆಗಿರುವ ರಾಘವೇಂದ್ರ ಸಿ ಅವರು ಅತಿಥಿಯಾಗಿ ಆಗಮಿಸಿ ಇಂದಿನ ಯುವ ಜನತೆ ಮಾದಕ ವಸ್ತುಗಳ ದಾಸರಾಗುತ್ತಿರುವುದು ಅಪಾಯಕಾರಿಯ ಅಂಶವಾಗಿದೆ. ಮಾದಕ ವ್ಯಸನ ಮಾಡಿದ ವ್ಯಕ್ತಿಗೆ ಮಾತ್ರವಲ್ಲದೆ ಕುಟುಂಬವೂ ಸಹ ಅದರ ಪರಿಣಾಮಕ್ಕೆ ಕಾರಣರಾಗುತ್ತಾರೆ ಎಂದು ಹಲವರು ನಿದರ್ಶನಗಳ ಮೂಲಕ ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗಿಸಿದರು.

ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು ಈ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯರ‍್ಥಿಗಳು ಮಾದಕ ದ್ರವ್ಯ ವ್ಯಸನದ ವಿರುದ್ಧ ಪ್ರತಿಜ್ಞಾವಿಧಿಯನ್ನ ಸ್ವೀಕರಿಸಿದರು.

ಎಕ್ಸಲೆಂಟ್ ಪದವಿ ಪರ‍್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿಯಾದ ಸರೋಜಿನಿ ಪಿ ಆಚಾರ‍್ಯರು ಎಲ್ಲರನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀನಿವಾಸ್ ವೈದ್ಯರು ಕಾರ‍್ಯಕ್ರಮ ನಿರೂಪಿಸಿ ವಂದಿಸಿದರು

 

Related Articles

error: Content is protected !!