ಹೊಸದಿಲ್ಲಿ: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠೆ ಕುರಿತು ಯಾವುದೇ ನಕಲಿ ಅಥವಾ ತಿರುಚಲಾದ ವಿಷಯ ಪ್ರಕಟಿಸದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ಶನಿವಾರ ಸಲಹೆ ನೀಡಿದೆ. ಮುಖ್ಯವಾಗಿ ಪರಿಶೀಲಿಸದ, ಪ್ರಚೋ ದನಕಾರಿ ಮತ್ತು ನಕಲಿ ‘ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವುದನ್ನು ಗಮನಿಸಲಾಗಿದೆ. ಇದರಿಂದ ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಲಹೆಯಲ್ಲಿ ಹೇಳಿದೆ.
ಇದೇ ವೇಳೆ ದೇಶದಲ್ಲಿ ಕೋಮು ಸೌಹಾರ್ದತೆ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಉದ್ದೇಶ ಹೊಂದಿರುವ ಯಾವುದೇ ನಕಲಿ ಅಥವಾ ತಿರುಚಲಾದ ವಿಷಯವನ್ನು ಪ್ರಸಾರಿಸದಂತೆ ಪತ್ರಿಕೆಗಳು, ಖಾಸಗಿ ಟಿವಿ ವಾಹಿನಿಗಳು ಮತ್ತು ಡಿಜಿಟಲ್, ಮಾಧ್ಯಮದಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಪ್ರಕಟಿಸುವವರಿಗೆ ಸಚಿವಾಲಯ ಸೂಚನೆ ನೀಡಿದೆ