125
ಕುಂದಾಪುರ: ಕಡಲ ತೀರದ ಕೋಡಿಯ ರೈತ ಗಂಗಾಧರ ಪೂಜಾರಿ ಅವರಿಗೆ ಹಡಿಲು ಭೂಮಿಯಲ್ಲಿ ಇವರ ಕೃಷಿ ಸಾಧನೆಗೆ ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಇವರ ಈ ಸಾಧನೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಸಂತಸ ವ್ಯಕ್ತಪಡಿಸಿ ಇವರ ನಿವಾಸಕ್ಕೆ ತೆರಳಿ ಶಾಸಕರು ಗೌರವಿಸಿ ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಪುರಸಭಾ ಮಾಜಿ ಉಪಾಧ್ಯಕ್ಷ ನಾಗರಾಜ್ ಕಾಂಚನ ಕೋಡಿ, ಚಕ್ರಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗೋಪಾಲ ಪೂಜಾರಿ ಕೋಡಿ ಹಾಗೂ ಸ್ಥಳೀಯ ಮುಖಂಡರಾದ ಶಂಕರ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

