Home » ವಿಶ್ವ ವಿನಾಯಕ ಆಂಗ್ಲ ಮಾದ್ಯಮ ಶಾಲೆ ತೆಕ್ಕಟ್ಟೆ: ೨೦ ನೇ ವಾರ್ಷಿಕ ಕ್ರೀಡಾಕೂಟ
 

ವಿಶ್ವ ವಿನಾಯಕ ಆಂಗ್ಲ ಮಾದ್ಯಮ ಶಾಲೆ ತೆಕ್ಕಟ್ಟೆ: ೨೦ ನೇ ವಾರ್ಷಿಕ ಕ್ರೀಡಾಕೂಟ

by Kundapur Xpress
Spread the love

ತೆಕ್ಕಟ್ಟೆ : ವಿಶ್ವವಿನಾಯಕ ನ್ಯಾಷನಲ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್‌ನ ೨೦ ನೇ ವಾರ್ಷಿಕ ಕ್ರೀಡೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಲ್ ಜಾಮಿಯಾ ಮಸ್ಜಿದ್ ತೆಕ್ಕಟ್ಟೆ ಇದರ ಅಧ್ಯಕ್ಷರಾದ ಮಹ್ಮದ್ ಸಲಾಂರವರು ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು ಕ್ರೀಡೆ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವುದರೊಂದಿಗೆ ಉತ್ತಮ ಸಾಧನೆ ಮಾಡಿದರೆ ಬದುಕನ್ನು ಕಟ್ಟಿಕೊಳ್ಳಬಹುದೆಂದು ತಿಳಿಸಿದರು. ಪ್ರತಿ ಕ್ರೀಡೆಗಳನ್ನು ವೈಜ್ಞಾನಿಕ ಸೂತ್ರಗಳೊಂದಿಗೆ ಅಭ್ಯಾಸ ಮಾಡಿದರೆ ಗೆಲುವು ನಿಶ್ಚಿತ ಎಂದು ತಿಳಿಸಿದರು.
ಕರ‍್ಯಕ್ರಮದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾರದಾ ಕಾಲೇಜಿನ ದೈಹಿಕ ಶಿಕ್ಷಕರಾದ ಸೂರಜ್ ಕುಮಾರ್ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಇದ್ದು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸಿದರು. ಶರೀರವನ್ನು ಸಧೃಢಗೊಳಿಸಲು ಶಾರೀರಿಕ ವ್ಯಾಯಾಮ ಬಹು ಮುಖ್ಯ ಎಂದು ತಿಳಿಸಿದರು. ಕ್ರೀಡೆಯಲ್ಲಿ ಕಲೆ ಮತ್ತು ಸಂಸ್ಕçತಿಯನ್ನು ಉಳಿಸಿ ಬೆಳೆಸುವ ಅಂಶಗಳು ಒಳಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ ಪ್ರಭಾಕರ ಶೆಟ್ಟಿಯವರು ಮಕ್ಕಳ ಉತ್ಸಾಹ ಹಾಗೂ ಸ್ಪರ್ಧಾ ಮನೋಭಾವವನ್ನು ಪ್ರಶಂಸಿದರು.

ವಿವಿಧ ಆಟೋಟ ಹಾಗೂ ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅತ್ಯುನ್ನತ ಅಂಕಗಳನ್ನು ಗಳಿಸಿ ಯಮುನಾ ಗ್ರೂಪ್‌ನ ವಿದ್ಯಾರ್ಥಿಗಳು ೨೦೨೫ – ೨೦೨೬ ನೇ ಸಾಲಿನ ಚಾಂಪಿಯನ್ ತಂಡವಾಗಿ ಟ್ರೋಫಿಯನ್ನು ತಮ್ಮ ದಾಗಿಸಿ ಕೊಂಡರು. ಕಾವೇರಿ ಗ್ರೂಪ್‌ನ ವಿದ್ಯಾರ್ಥಿಗಳು ಧ್ವಿತೀಯ ಸ್ಥಾನ ಗಳಿಸಿ ರನ್ನರ್ ಅಪ್ ಟ್ರೋಫಿಯನ್ನು ಪಡೆದರು.
ಕರ‍್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಡ್ರಿಲ್, ಯೋಗ, ಲೇಜಿಮ್, ಡಂಬಲ್ಸ್, ಹೂಪ್ಸ್, ಕರಾಟೆ, ಪಿರಾಮಿಡ್ ಮೊದಲಾದ ಸಾಹಸ ಕ್ರೀಡೆಗಳನ್ನು ಪ್ರದರ್ಶಿಸಿದರು.
ಕರ‍್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ನಿತಿನ್ ಡಿ ಆಲ್ಮೇಡಾರವರು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರುಗಳಾದ ಆನಂದ್ ಹಾಗೂ ಗೋಪಾಲ ಶೆಟ್ಟಿಯವರು ಕರ‍್ಯಕ್ರಮ ಸಂಘಟಿಸಿದರು ಶಿಕ್ಷಕಿಯರಾದ ಸುಷ್ಮಾ ಆರ್ ಹಾಗೂ ಸ್ಮಿತಾ ನಾÊಕ್ ಕರ‍್ಯಕ್ರಮ ನಿರ್ವಹಿಸಿದರು, ಶಿಕ್ಷಕಿ ಅಕ್ಷಯ ಶೆಟ್ಟಿ ಹಾಗೂ ನಾಗರತ್ನ ಹೆಬ್ಬಾರ್ ಸ್ವಾಗತಿಸಿ ಪರಿಚಯಿಸಿದರು, ನಂದಿನಿ ಆಚಾರ್ಯ ಹಾಗೂ ಪ್ರತಿಮಾ ವಂದಿಸಿದರು.

 

Related Articles

error: Content is protected !!