ಪ್ರಧಾನಿ ನರೇಂದ್ರ ಮೋದೀಜಿಯವರ ಜನ್ಮ ದಿನವಾದ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರ ವರೆಗೆ ಕಳೆದ 5 ವರ್ಷಗಳಿಂದ ತನ್ನ ಆಟೋ ರಿಕ್ಷಾಕ್ಕೆ ಮೋದಿಜಿಯವರ ಬ್ಯಾನರ್ ನ್ನು ಕಟ್ಟಿಕೊಂಡು ಬಾಡಿಗೆ ಮಾಡುತ್ತಿರುವ ಆತ್ರಾಡಿಯ ಆಟೋ ಚಾಲಕ ಜನ ಸಂಘ ಮೂಲದಿಂದ ಪಕ್ಷದ ಕಾರ್ಯಕರ್ತರಾಗಿರುವ ಶ್ರೀ ಗೋಪಾಲ ಕೃಷ್ಣ ಆಚಾರ್ಯ ಇವರನ್ನು ಆತ್ರಾಡಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಯವರ ನೇತೃತ್ವ ದಲ್ಲಿ ಶಾಲು ಹೊದಿಸಿ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಶ್ರೀ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀ ಪ್ರವೀಣ್ ಪೂಜಾರಿ, ಪಂಚಾಯತ್ ಅಧ್ಯಕ್ಷರು ಶ್ರೀ ಹರೀಶ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಾರದಾ ಶೆಟ್ಟಿಗಾರ್, ಮಾಜಿ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಶ್ರೀಮತಿ ಪ್ರಮೀಳಾ ಶೆಟ್ಟಿಗಾರ್, ಸದಸ್ಯರಾದ ಗಂಗಾಧರ್ ಪ್ರಭು ಜಡ್ಡು, ಶ್ರೀಮತಿ ಹರಿಣಿ ಶೆಟ್ಟಿ, ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷರು ಶ್ರೀ ಸಾಧು ಪೂಜಾರಿ, ಚೆನ್ನಿ ಬೆಟ್ಟು ನಾಗ ಬ್ರಹ್ಮ ಸ್ಥಾನದ ಮೊಕ್ತೇಸರ ರಾದ ಶ್ರೀ ವಸಂತ ಶೆಟ್ಟಿ ಚೆನ್ನಿ ಬೆಟ್ಟು, ಶ್ರೀ ಬಾಲ ಕೃಷ್ಣ ಹೆಗ್ಡೆ ಬೀರ್ಬೇಟ್ಟು, ಶ್ರೀ ಮುರಳೀಧರ ಹಾಲoಬಿ, ಶ್ರೀ ದೇವೇಂದ್ರ ಎ ಕಾಮತ್, ಶ್ರೀ ಸದಾಶಿವ ನಾಯಕ್, ಶ್ರೀ ಹರೀಶ್ ಮೆಡಿಕಲ್, ಶ್ರೀ ದೇವದಾಸ್ ನಾಯಕ್,ಶ್ರೀ ದೇವೇಂದ್ರ ನಾಯಕ್ ಮದಗ, ಶ್ರೀ ಶ್ರೀಧರ್ ಶೆಟ್ಟಿಗಾರ್,ಶ್ರೀ ಉಮೇಶ್ ಆಚಾರ್ಯ, ಜೈ ಹನುಮಾನ್ ಸಂಘದ ಅಧ್ಯಕ್ಷ ಶ್ರೀ ಉದಯ ನಾಯ್ಕ್, ಶ್ರೀ ಸತೀಶ್ ನಾಯ್ಕ್, ಶ್ರೀ ಪುನೀತ್ ಪರೀಕ, ಶ್ರೀ ನವೀನ್ ಪೂಜಾರಿ ಪರೀಕ,ಶ್ರೀ ರಮೇಶ್ ಹೆಗ್ಡೆ, ಶ್ರೀ ಹರಿ ಮಾಮ್,ಆಟೋ ಚಾಲಕ ರಾದ ಶ್ರೀ ಕಮಲಾಕ್ಷ ಕಾಮತ್, ಶ್ರೀ ಗುರುದತ್ ಮಲ್ಯ ಮದಗ,ಗೋಪಾಲ್ ನಾಯಕ್ ಆತ್ರಾಡಿ ಮುಂತಾದವರು ಹಾಜರಿದ್ದರು.

