242
ಕಟೀಲು : ಕಟೀಲು ದೇವಸ್ಥಾನದ ಎದುರುಗಡೆ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ಏಕಾಏಕೀ ಹೊತ್ತಿ ಉರಿದಿದ್ದು ಬಸ್ಸಿನೊಳಗಿದ್ದ ಮೂವರು ಪವಾಡ ಸದೃಶ ರೀತಿಯಿಂದ ಪಾರಾಗಿದ್ದಾರೆ ಸುರತ್ಕಲ್ ನ ಓ ಎಂ ಪಿ ಎಲ್ ಸಂಸ್ಥೆಗೆ ಸೇರಿದ ಈ ಬಸ್ ನೌಕರರನ್ನು ಬುಧವಾರ ಮಧ್ಯಾಹ್ನ 2:45 ಸುಮಾರಿಗೆ ನೌಕರರನ್ನು ಇಳಿಸಿ ವಾಪಸ್ ಹೋಗುವ ಸಂದರ್ಭದಲ್ಲಿ ಕಟೀಲು ದೇವಸ್ಥಾನದ ಎದುರುಗಡೆ ನಿಲ್ಲಿಸಲಾಗಿತ್ತು
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿದ್ದು ಬಸ್ಸಿನೊಳಗಿದ್ದ ಚಾಲಕ ಒಟ್ಟು ಮೂವರು ತಕ್ಷಣ ಬಸ್ಸಿನಿಂದ ಜಿಗಿದು ಅಪಾಯದಿಂದ ಪಾರಾಗಿದ್ದಾರೆ ಸ್ಥಳೀಯ ನೀರಿನ ಟ್ಯಾಂಕರ್ ನ ಸಹಾಯದಿಂದ ನೀರನ್ನು ಹಾಯಿಸಿ ಬಸ್ಸಿಗೆ ಬಿದ್ದ ಬೆಂಕಿಯನ್ನು ನಂದಿಸಲಾಯಿತು

