337
ಉಡುಪಿ : ಮಹಿಳೆ ಒಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಕೊಳಂಬೆ ಆರನೇ ಕ್ರಾಸ್ ಬೈಲೂರು ಎಂಬಲ್ಲಿ ನಡೆದಿದ್ದು ಅಗ್ನಿಶಾಮಕ ಪಡೆಯ ಸಹಾಯದಿಂದ ಮಹಿಳೆಯನ್ನು ರಕ್ಷಿಸಲಾಗಿದೆ
ಸ್ಥಳೀಯ ನಿವಾಸಿಯಾದ ಸವಿತಾ ಕಾಮತ್ ಎಂಬವರು 50 ಅಡಿ ಆಳದ 10 ಅಡಿ ಅಗಲದ ಹಾಗೂ 30 ಅಡಿ ನೀರಿರುವ ಬಾವಿಗೆ ಅಕಸ್ಮಾತ್ತಾಗಿ ಬಿದ್ದಿದ್ದು ಈ ವೇಳೆ ಬಾವಿಯ ಪಂಪ್ ಸೆಟ್ ನ ಫುಟ್ಬಾಲ್ ಗೆ ಜೋಡಿಸಿರುವ ಹಗ್ಗವನ್ನು ಹಿಡಿದು ಜೀವನ್ಮರಣ ಪರಿಸ್ಥಿತಿಯಲ್ಲಿದ್ದರು ಕೂಡಲೇ ಉಡುಪಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಯಿತು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ಸತೀಶ್ ನೇತೃತ್ವದಲ್ಲಿ ಸಿಬ್ಬಂದಿ ವಿನಾಯಕ ಎಂಬವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಮಹಿಳೆಯನ್ನು ಹಗ್ಗದ ಮೂಲಕ ಮೇಲಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿದ್ದಾರೆ

