191
ಬ್ರಹ್ಮಾವರ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೇಲಿನಿಂದ ಕಾಣೆಯಾದ ಮೂವರು ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿಯರು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಿಂದ ಪತ್ತೆ ಹಚ್ಚಿದ್ದಾರೆ.
ಹಾಸ್ಟೇಲ್ ವಾರ್ಡನ್ ನೀಡಿದ ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಪನಿರೀಕ್ಷಕ ಅಶೋಕ ಮಾಳಾಬಗಿ ನೇತೃತ್ವದಲ್ಲಿ ಸಿಬ್ಬಂದಿಯರಾದ ಸಿದ್ದು ಸಕನಳ್ಳಿ ಮತ್ತು ಕಿರಣ್ ಇವರು ತನಿಖೆ ನಡೆಸಿ, ಬಂಟ್ವಾಳ ಬಿಸಿ ರೋಡ್ ಬಳಿ ರಾತ್ರಿ 10 ಗಂಟೆಗೆ ಮೂವರನ್ನೂ ಸುರಕ್ಷಿತವಾಗಿ ಪತ್ತೆ ಮಾಡಿದ್ದಾರೆ.
ಮೊಬೈಲ್ ಲೊಕೇಶನ್ ಆಧಾರದ ಮೇಲೆ ವಿದ್ಯಾರ್ಥಿನಿಯರು ಮಂಗಳೂರಿನಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.ಬ್ರಹ್ಮಾವರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

