ಅಮೆಜಾನ್‌ ಕಂಪನಿಯ ಆನ್‌ ಲೈನ್‌ ಹಬ್‌ ಪ್ರಾಂಚಸಿ ಮಾಡಿಸಿಕೊಡುವುದಾಗಿ ನಂಬಿಸಿ : ವಂಚನೆ

by Kundapur Xpress
Spread the love

ಮಣಿಪಾಲ: ಅಮೆಜಾನ್‌ ಕಂಪನಿಯ ಆನ್‌ ಲೈನ್‌ ಹಬ್‌ ಪ್ರಾಂಚಸಿಯನ್ನು ಉಡುಪಿ-ಮಣಿಪಾಲ ಅಲೆವೂರು ರಸ್ತೆಯಲ್ಲಿರುವ ಬಾಳಿಗಾ ಕಾಂಪ್ಲೆಕ್ಸ್‌ ನಲ್ಲಿ ಮಾಡಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯಿಂದ ಹಂತ ಹಂತವಾಗಿ ರೂ. 4.20 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಉಡುಪಿ ಜಿಲ್ಲೆಯ ನಾಲ್ಕೂರು ಗ್ರಾಮದ ರವಿಚಂದ್ರ(48) ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 29ರಂದು ಎಂ. ಸಾಯಿಕೃಷ್ಣ ಎಂಬಾತ ರವಿಚಂದ್ರ ಅವರಿಗೆ ಕರೆ ಮಾಡಿ, ಉಡುಪಿ – ಮಣಿಪಾಲ ಅಲೆವೂರು ರಸ್ತೆಯ ಬಾಳಿಗಾ ಕಾಂಪ್ಲೆಕ್ಸ್‌ನಲ್ಲಿ ಅಮೆಜಾನ್ ಕಂಪನಿಯ ಆನ್‌ಲೈನ್ ಹಬ್ ಫ್ರಾಂಚೈಸಿ ಮಾಡಿಸಿಕೊಡುವುದಾಗಿ ಹೇಳಿದ್ದಾನೆ. ಆರಂಭದಲ್ಲಿ ರವಿಚಂದ್ರ ಅವರು ಫ್ರಾಂಚೈಸಿ ಬೇಡವೆಂದು ಹೇಳಿ ಕರೆ ಕಡಿತಗೊಳಿಸಿದ್ದರು ಆದರೆ ಮತ್ತೆ ಕರೆ ಮಾಡಿದ ಸಾಯಿಕೃಷ್ಣ ಪ್ರಾರಂಭದಲ್ಲಿ ರಿಜಿಸ್ಟ್ರೇಶನ್‌ ಮಾತ್ರ ಆನ್‌ ಲೈನ್‌ ನಲ್ಲಿ ಮಾಡಿಕೊಳ್ಳ ಬೇಕು ತಮ್ಮ ಕಂಪನಿಯ ಪೀಲ್ಡ್‌ ಆಫೀಸರ್‌ ನವರು ಸ್ಥಳಕ್ಕೆ ಬೇಟಿ ನೀಡಿ ಕಂಪನಿಯೊಂದಿಗೆ ಒಪ್ಪಂದ ಮತ್ತು ಏರಿಯಾ ಪಿನ್‌ ಕೋಡ್‌ ಲಾಕಿಂಗ್‌ ಮಾಡಿಕೊಡುತ್ತಾರೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಸಾಯಿಕೃಷ್ಣ ಸೇರಿದಂತೆ ಎಂ. ಗುರುಸ್ವಾಮಿ, ಸುರೇಶ್ ಕುಮಾರ್, ರಾಜ್ ಕುಮಾರ್ ಹಾಗೂ ಮಹೇಶ್ ಎಂಬವರು ತಾವು ಕಂಪನಿಯ ಫೀಲ್ಡ್ ಆಫೀಸರ್‌ಗಳೆಂದು ಪರಿಚಯಿಸಿಕೊಂಡು ಉಡುಪಿ ಮಣಿಪಾಲದಲ್ಲಿ ಡೆಲಿವರಿ ಹಬ್ ಫ್ರಾಂಚೈಸಿ ಮಾಡಿಸಿಕೊಡುವುದಾಗಿ ನಂಬಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳ ಮಾತನ್ನು ನಂಬಿದ ರವಿಚಂದ್ರ ಅವರು ವಿವಿಧ ಹಂತಗಳಲ್ಲಿ ಒಟ್ಟು ₹4,20,000 ಹಣವನ್ನು ವರ್ಗಾವಣೆ ಮಾಡಿದ್ದು, ಬಳಿಕ ಫ್ರಾಂಚೈಸಿ ನೀಡದೆ ಆರೋಪಿಗಳು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!