Home » ಗಾಂಧಿಜೀ,ಶಾಸ್ತೀಜೀಯವರ ಜಯಂತಿ ಕಾರ್ಯಕ್ರಮ
 

ಗಾಂಧಿಜೀ,ಶಾಸ್ತೀಜೀಯವರ ಜಯಂತಿ ಕಾರ್ಯಕ್ರಮ

ಮಣೂರು ಪಡುಕರೆ ಶಾಲೆ

by Kundapur Xpress
Spread the love

ಕೋಟ : ವಿಶ್ವವನ್ನು ಗಮನ ಸೆಳೆದ ಶಾಂತಿಧೂತ, ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 155 ನೇ ಜನ್ಮದಿನಾಚರಣೆ ಹಾಗೂ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 120ನೇ ಜನ್ಮದಿನಾಚರಣೆಯನ್ನು ವಿಶಿಷ್ಟವಾಗಿ ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು ಪಡುಕರೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರು  ಪೋಷಕರು ಎಸ್.ಡಿ.ಎಂ ಸಿ ಸದಸ್ಯರೊಂದಿಗೆ ಆಚರಿಸಲಾಯಿತು.ಪೂರ್ವಾಹ್ನ ವಿದ್ಯಾರ್ಥಿಗಳ ಜಾಥಾ ನಂತರ ಸಮುದ್ರ ಕಿನಾರೆ ಹಾಗೂ ರಸ್ತೆ, ಸಮುದಾಯ ವಿಭಾಗದಲ್ಲಿನ ಕಸ-ಕಡ್ಡಿ ಸಂಪೂರ್ಣವಾಗಿ ತೆಗೆದು ಚೀಲದಲ್ಲಿ ತುಂಬಿಸಿ ಸ್ಥಳೀಯ ಎಸ್‍ಎಲ್‍ಆರ್‍ಎಂ ಘಟಕಕ್ಕೆ ಒಪ್ಪಿಸುವ ಕಾರ್ಯಕ್ರಮ ಜರುಗಿತು.

ಈ ಹಿನ್ನಲ್ಲೆಯಲ್ಲಿ ನಡೆದ ಸಭೆಯಲ್ಲಿ ಗಾಂಧೀಜಿ , ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಲಾಯಿತು.
ಮಹತ್ಮಾಜಿಯವರ ಜನ್ಮದಿನಾಚರಣೆಯ ಈ ವರ್ಷದ ವಿಶೇಷತೆ ಬೆಳಗಾವಿಯ ರಾಷ್ಟ್ರೀಯ ಕಾಂಗ್ರೇಸಿನ ಅಧಿವೇಶನದ ಹಿನ್ನಲೆ ಹಾಗೂ ಶಾಸ್ರಿಜೀಯವರ ಬದುಕು ಹೋರಾಟ ಕುರಿತು ಪತ್ರಾಂಕಿತ ಮಖ್ಯೋಪಾಧ್ಯಾಯ ವಿವೇಕ್ ಗಾಂವ್ಕರ್ ನುಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ ಮೆಂಡನ್, ಪ್ರಣತಿ, ಸಮೃದ್ಧಿ ಮೊಗವೀರ, ಅನುಶ್ರೀ ದಿನದ ಮಹತ್ವ ಕುರಿತು ಮೌಲಿತವಾದ ಮಾತುಗಳನ್ನು ಆಡಿದರು. ವಿದ್ಯಾರ್ಥಿನಿಯರು ಸರ್ವಧರ್ಮ ಪ್ರಾರ್ಥನೆ ನಿರ್ವಹಿಸಿದರು. ಧಾರ್ಮಿಕ ಪಠಣದಲ್ಲಿ ಬೈಬಲ್ ವಾಚನ ಟೀನಾ ಶಿಕ್ಷಕಿ , ಖುರಾನ್ ವಾಚನ ಬರೀರಾ ವಿದ್ಯಾರ್ಥಿನಿ, ಭಗವದ್ಗಿತೆ ಶ್ಲೋಕ ಮತ್ತು ಅರ್ಥ ಪೂರ್ವಿ ವಾಚಿಸಿ ಅರ್ಥೈಸಿದರು.

ಸಮಾರಂಭದಲ್ಲಿ ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷ ರಾಘವೇಂದ್ರ ,ಪ್ರಾಥಮಿಕ ವಿಭಾಗದ ಅಧ್ಯಕ್ಷ ನಾಗರಾಜ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಂಜುನಾಥ ಹೊಳ್ಳ ಉಪಸ್ಥಿತರಿದ್ದರು.ಹಿರಿಯ ಶಿಕ್ಷಕರಾದ ರಾಮ್‍ದಾಸ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ರಾಜೀವ್ ವಂದಿಸಿದರು ಶಿಕ್ಷಕ ಹೆರಿಯ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು, ಎಸ್. ಡಿ. ಎಂ .ಸಿ ಸದಸ್ಯರು, ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

   

Related Articles

error: Content is protected !!