ಕುಂದಾಪುರ : ಮೀನುಗಾರರು ಬೋಟು, ಬಲೆಗಳನ್ನು ಕಳೆದುಕೊಂಡರೆ ಅವರಿಗೆ ತಮ್ಮ ಮನೆ ಕಳೆದುಕೊಂಡಂತೆ. ಜೀವನಾಧಾರವಾಗಿದ್ದ ಬೋಟುಗಳು ಆಕಸ್ಮಿಕ ಅಗ್ನಿ ದುರಂತದಲ್ಲಿ ನಾಶವಾದಾಗ ಮೀನುಗಾರರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ. ಪರಿಹಾರ ಒದಗಿಸುವಾಗ ಎದುರಾಗುವ ಅಡೆತಡೆಗಳನ್ನು ನಿಭಾಯಿಸಿ ಸ್ವಲ್ಪ ವಿಳಂಬವಾದರೂ ಗರಿಷ್ಠ ಪ್ರಮಾಣದ ಪರಿಹಾರ ಕೊಡಿಸಿದ ತೃಪ್ತಿ ನನಗಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಹೇಳಿದರು.
ಭಾನುವಾರ ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕಾ ಇಲಾಖೆಯ ವತಿಯಿಂದ ಸಂತ್ರಸ್ತ ಮೀನುಗಾರರಿಗೆ ಪರಿಹಾರ ಹಾಗೂ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್‌ಕೊಡ್ಡಿ ಮಾತನಾಡಿ, ಮೀನುಗಾರರಿಗೆ ಗರಿಷ್ಠ ಮೊತ್ತದ ಪರಿಹಾರ ನೀಡುವಲ್ಲಿ ಸಚಿವರ ಶ್ರಮ ಶ್ಲಾಘನೀಯ. ಸಚಿವರು ಕೇಂದ್ರದಿಂದ ಕೊಟ್ಟಿರುವುದನ್ನು ಸಹ ಹೇಳಿದ್ದರೆ ಖುಷಿ ಪಡುತ್ತಿದ್ದೆ ಎಂದರು ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಜರಿದ್ದರು
ಮೀನುಗಾರಿಕಾ ಅಪರ ನಿರ್ದೇಶಕ ಹರೀಶ ಕುಮಾರ್‌ಸ್ವಾಗತಿಸಿ, ಜಂಟಿನಿರ್ದೇಶಕ ವಿವೇಕ್ ಆರ್. ವಂದಿಸಿದರು. ರಮೇಶ್ ಕುಂದರ್ ಅಭಿನಂದನಾ ಪತ್ರ ವಾಚಿಸಿದರು. ಜಿ. ಸುಂದರ ಕಾರ್ಯಕ್ರಮ ನಿರೂಪಿಸಿದರು

