Home » ವಿದ್ಯಾರ್ಥಿಗಳಲ್ಲಿ ಸಾಧನೆಗೈಯುವ ಇಚ್ಛಾಶಕ್ತಿ ಇರಬೇಕು
 

ವಿದ್ಯಾರ್ಥಿಗಳಲ್ಲಿ ಸಾಧನೆಗೈಯುವ ಇಚ್ಛಾಶಕ್ತಿ ಇರಬೇಕು

–ಆನಂದ್ ಸಿ ಕುಂದರ್

by Kundapur Xpress
Spread the love

ಕೋಟ : ವಿದ್ಯಾರ್ಥಿಗಳಲ್ಲಿ ಸಾಧನೆಗೈಯುವ ಗುರಿ ಇರಬೇಕು ಅಂತಹ ಗುರಿ ಇದ್ದರೆ ಯಶಸ್ಸಿನ ಗಟ್ಟ ಎರಲು ಸಾಧ್ಯವಾಗುತ್ತದೆ ಎಂದು  ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.

ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ,ಗೀತಾನಂದ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಪ್ರತಿಭಾನ್ವೇಷಣೆ ಅಂತರ್ ತರಗತಿ ಸಾಂಸ್ಕ್ರತಿಕ ಸ್ಪರ್ಧೆ,ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು

ಪ್ರಸ್ತುತ ವಿದ್ಯಾರ್ಥಿಗಳು ತಂದೆ ತಾಯಿಗೆ ಹೊರೆಯಾಗದಂತೆ ಶಿಕ್ಷಣ ಪಡೆದು ತನ್ನ ತಳಹದಿಯ ಮೇಲೆ ನಿಲ್ಲಬೇಕು,ಆ ಮೂಲಕ ಸಮಾಜದ ಜವಾಬ್ದಾರಿ ಅರಿತು ಸರ್ವಕ್ಷೇತ್ರದಲ್ಲಿ ಗುರುತಿಸುವಂತೆ ಸಲಹೆ ನೀಡಿದರಲ್ಲದೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು,ಮನೆಯ ಜವಾಬ್ದಾರಿ ಪಡೆದುಕೊಂಡು ತಾಳ್ನೆಯಿಂದ ವ್ಯವಹರಿಸುವ ಮನಸ್ಥಿತಿ ಸೃಷ್ಠಿಸಿಕೊಳ್ಳಬೇಕು,ಶೈಕ್ಷಣಿಕ ಕ್ಷೇತ್ರದಲ್ಲಿ ಪಡುಕರೆ ಎಂಬ ಗ್ರಾಮೀಣ ಪರಿಸರ ಮುಂಚೂಣಿಗೆ ನಿಂತಿದೆ ಅಲ್ಲದೆ ಸಾಂಸ್ಕ್ರತಿಕವಾಗಿ ಮೈದುಂಬಿ ಸರ್ವಕ್ಷೇತ್ರದಲ್ಲಿ ಸಮಕಾಲಿನ ವ್ಯವಸ್ಥೆ ಮುನ್ನಗ್ಗುತ್ತಿದೆ ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ ರಾಜೇಂದ್ರ ಎಸ್. ನಾಯಕ ವಹಿಸಿದ್ದರು. ಇದೇ ವೇಳೆ ಗೀತಾನಂದ ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ ನೀಡಲಯಿತು.

ಮುಖ್ಯ ಅಭ್ಯಾಗತರಾಗಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ ಪೂಜಾರಿ,ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದಿನ,ಶಾಲಾಭಿವೃದ್ಧಿ ಸಮಿತಿಯ ಸದಸ್ಯ ರಮೇಶ್ ಎಚ್ ಕುಂದರ್, ಐಕ್ಯೂ ಎಸಿ ಸಂಚಾಲಕ ಡಾ. ಸುಬ್ರಮಣ್ಯ ಎ.,ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕು. ಪೂಜಾ,ಉಪಾಧ್ಯಕ್ಷೆ ಕು. ದೀಕ್ಷಾ ,ವಿದ್ಯಾರ್ಥಿ ವೇದಿಕೆ ಪದಾಧಿಕಾರಿಗಳಾದ. ಕು. ಸಂಜನಾ ಕಾಮತ್,ಕು, ಯಶಿಕ,ಸಾಂಸ್ಕöÈತಿಕ ಪ್ರತಿನಿಧಿಗಳಾದ ಶ್ರೇಯಸ್ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಆಚಾರ್ ಸ್ವಾಗತಿಸಿದರು.ಕಾರ್ಯಕ್ರಮವನ್ನು ಉಪನ್ಯಾಸಕಿ ಮಮತಾ ನಿರೂಪಿಸಿದರು. ಸಾಂಸ್ಕ್ರತಿಕ ವಿಭಾಗದ ಸಂಚಾಲಕರಾದ ಉಪನ್ಯಾಸಕ ಪ್ರೊ. ಶಂಕರ ನಾಯ್ಕ ಬಿ. ವಂದಿಸಿದರು.

   

Related Articles

error: Content is protected !!