Home » 23,90,000 ವಿಮಾ ಪರಿಹಾರ ಮೊತ್ತ ವಿತರಣೆ
 

23,90,000 ವಿಮಾ ಪರಿಹಾರ ಮೊತ್ತ ವಿತರಣೆ

by Kundapur Xpress
Spread the love

ಕುಂದಾಪುರ : ಭೀಕರ ಬೆಂಕಿ ಆಕಸ್ಮಿಕ ಒಂದರಲ್ಲಿ ಸುಟ್ಟು ಹೋದ ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ಸಮುದ್ರ ತಟದಲ್ಲಿ ಲಂಗರು ಹಾಕಿದ ಹಲವಾರು ಮೀನುಗಾರಿಕಾ ಬೋಟುಗಳಲ್ಲಿ ಒಂದಾದ “ಶ್ರೀಗುರು” ಬೋಟಿನ ಸಾಮಾನ್ಯ ವಿಮಾ ಪರಿಹಾರವಾದ ರೂ.23,90,000/- ಮೊತ್ತವನ್ನು ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಇದರ ಕುಂದಾಪುರ ಶಾಖೆಯಲ್ಲಿ ಬೋಟಿನ ಮಾಲಕರಾದ ಶ್ರೀ ಮಂಜುನಾಥ ಖಾರ್ವಿ ಇವರಿಗೆ ಹಿರಿಯ ಶಾಖಾ ಪ್ರಬಂಧಕರು ಹಾಗೂ ಅಧಿಕಾರಿಗಳು ಹಸ್ತಾಂತರಿಸಿದರು.

ಈಗಾಗಲೇ ಅಂತರಾಷ್ಟ್ರೀಯ ಸಾಗಾಣಿಕೆಯಲ್ಲಿದ್ದ ಮೀನು ಉತ್ಪನ್ನಗಳ ದಾವೆಯೊಂದರಲ್ಲಿ ಅಂದಾಜು ರೂ.40 ಲಕ್ಷ, ತಲಾ ರೂ.15 ಲಕ್ಷದ ಮೋಟಾರು ವಾಹನ ಮಾಲೀಕರ ಅಪಘಾತ ಮೃತ್ಯು ಸಂಬಂಧ ದಾವೆಗಳು ಹಾಗೂ ಇತರೇ ಬೃಹತ್ ಮೊತ್ತದ ಹತ್ತು ಹಲವಾರು ವಿಮಾ ಪರಿಹಾರಗಳನ್ನು ಒದಗಿಸಿ ಪರಿಸರದ ಅದರಲ್ಲೂ ಆರ್ಥಿಕವಾಗಿ ದುರ್ಬಲ ವರ್ಗದ ಹಾಗೂ ಶ್ರಮಿಕ ವರ್ಗದ ಹಿತವನ್ನು ಕಾಯುವಲ್ಲಿ ಮುಂಚೂಣಿಯಲ್ಲಿರುವ ಭಾರತ ಸರಕಾರದ ಅಧೀನದಲ್ಲಿರುವ ನ್ಯಾಷನಲ್ ಇನ್ಶೂರೆನ್ಸ್ ಸಂಸ್ಥೆಯು ವಿಮಾಕ್ಷೇತ್ರ ನಿಯಂತ್ರಕ IRDAI ಯ ಮಾರ್ಗದರ್ಶಿಯಂತೆ ತನ್ನ ಪಾರದರ್ಶಕ ವ್ಯವಹಾರಗಳಿಂದ ಮುಂದೆಯೂ ಸಮಾಜ ಸೇವೆಯಲ್ಲಿ ತನ್ನ ಬದ್ಧತೆಯನ್ನು ಉಳಿಸಿಕೊಳ್ಳುವಲ್ಲಿ ಶ್ರಮಿಸಲಿದೆ ಎಂದು ಶಾಖೆಯ ಪ್ರಬಂಧಕರು ನುಡಿದರು

 

Related Articles

error: Content is protected !!