ಕೋಟ : ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಂಸ್ಥೆಯ ಮಹಾ ಸಭೆಯು ಚಿತ್ರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಜರುಗಿತು.
ಮಹಾ ಸಭೆಯ ಅಧ್ಯಕ್ಷತೆಯನ್ನು ಪ್ರಸ್ತುತ ಅಧ್ಯಕ್ಷ ಮಂಜುನಾಥ್ ಆಚಾರ್ ವಹಿಸಿದ್ದರು. ಸಭೆಯಲ್ಲಿ ಗೌರವಾಧ್ಯಕ್ಷ ದಿನೇಶ್ ಆಚಾರ್,ಸಂಚಾಲಕ ನಾಗೇಂದ್ರ ಆಚಾರ್, ಕಾರ್ಯದರ್ಶಿ ಸತೀಶ್ ಆಚಾರ್,ಕೋಶಾಧಿಕಾರಿ ಗಜೇಂದ್ರ ಆಚಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ 2023-24ರ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸತೀಶ್ ಆಚಾರ್ ವಾಚಿಸಿದರು,ಕೋಶಾಧಿಕಾರಿ ಗಜೇಂದ್ರ ಆಚಾರ್ 2023-24ರ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಿದರು.
2024-25 ರ ನೂತನ ಕಾರ್ಯಕಾರಿ ಮಂಡಳಿ ರಚನೆ ಮಾಡಲಾಯಿತು. ನೂತನ ಕಾರ್ಯಕಾರಿ ಮಂಡಳಿ ರಚನೆಯನ್ನು ಮಾಧವ ಪೈ ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ನಡೆಸಿಕೊಟ್ಟರು.
2024-25ಕ್ಕೆ ನೂತನ ಅಧ್ಯಕ್ಷ ವಿಶ್ವನಾಥ್ ನಾವಡ, ಕಾರ್ಯದರ್ಶಿಯಾಗಿ ಹರೀಶ್ ಆಚಾರ್, ಕೋಶಾಧಿಕಾರಿಯಾಗಿ ನಾಗೇಂದ್ರ ಆಚಾರ್ ,ಗೌರವಾಧ್ಯಕ್ಷರಾಗಿ ಮಂಜುನಾಥ್ ಆಚಾರ್, ಸಂಚಾಲಕರಾಗಿ ರವಿ ಪೂಜಾರಿ, ಉಪಾಧ್ಯಕ್ಷರಾಗಿ ಉದಯ ಆಚಾರ್,ಜೊತೆ ಕಾರ್ಯದರ್ಶಿಯಾಗಿ ರಾಜೇಶ ಪೂಜಾರಿ, ಲೆಕ್ಕ ಪರಿಶೋಧಕರಾಗಿ ಮಾಧವ ಪೈ, ಮುಖ್ಯ ಸಲಹೆ ಗಾರರಾಗಿ ಸತ್ಯ ನಾರಾಯಣ ನಾಯರಿ, ಗೌರವ ಸಲಹೆಗಾರರಾಗಿ ಸೀತಾರಾಮ್ ಆಚಾರ್ ಮತ್ತು ರಾಘವೇಂದ್ರ ಆಚಾರ್, ವಿಶೇಷ ಪ್ರತಿನಿಧಿಯಾಗಿ ಗಣಪತಿ ಆಚಾರ್‍ರವರು ಆಯ್ಕೆಯಾಗಿ ಹೊಸ ಕಾರ್ಯಕಾರಿ ಮಂಡಳಿಗೆ 2024-25ನೇ ಸಾಲಿಗೆ ಹಸ್ತಾಂತರ ಮಾಡಲಾಯಿತು.
ಈ ಮಹಾ ಸಭೆಯನ್ನು ಸತ್ಯ ನಾರಾಯಣ ನಾಯರಿ ನಿರೂಪಿಸಿದರು, ಹರೀಶ್ ಆಚಾರ್ ಪ್ರಾರ್ಥಿಸಿದರು, ಕಾರ್ಯದರ್ಶಿ ಸತೀಶ್ ಆಚಾರ್ ರವರು ವಂದಿಸಿದರು.