Home » ಗಗನ ಮುಖಿಯಾದ ಚಿನ್ನದ ಬೆಲೆ
 

ಗಗನ ಮುಖಿಯಾದ ಚಿನ್ನದ ಬೆಲೆ

by Kundapur Xpress
Spread the love

ಮುಂಬೈ:  ಒಂದೇ ದಿನ ಚಿನ್ನದ ಬೆಲೆ 10 ಗ್ರಾಂ ಗೆ 1500 ರೂ. ಏರಿಕೆಯಾಗಿದೆ. ಮೊದಲ ಬಾರಿಗೆ 10 ಗ್ರಾಂ ಚಿನ್ನದ ಬೆಲೆ 70 ಸಾವಿರದ ಗಡಿ ದಾಟಿ 71100 ರೂಪಾಯಿ ತಲುಪಿದೆ.

ಭೌಗೋಳಿಕ ಹಾಗೂ ರಾಜಕೀಯ ಅಪಾಯ ಸಾಧ್ಯತೆಗಳು ಮತ್ತು ಕೇಂದ್ರೀಯ ಬ್ಯಾಂಕ್ ಗಳಿಂದ ಖರೀದಿ ಭರಾಟೆಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಗಗನ ಮುಖಿಯಾಗಿದೆ ಬೆಳ್ಳಿ ಕೂಡಾ ಇದರಲ್ಲಿ ಪಾಲು ಪಡೆದಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನ ಬೆಳ್ಳಿಯ ಬೆಲೆ 2000 ರೂ ಹೆಚ್ಚಳಗೊಂಡಿದ್ದು, ಕೆ.ಜಿ. ಬೆಳ್ಳಿ ಬೆಲೆ 80 ಸಾವಿರದ ಗಡಿ ದಾಟಿ 81200 ರೂಪಾಯಿ ತಲುಪಿದೆ.

ಆದರೆ ಈ ಭಾರಿ ಬೆಲೆ ಏರಿಕೆ ಆಭರಣ ಮಳಿಗೆಗಳ ವ್ಯವಹಾರಕ್ಕೆ  ಪೆಟ್ಟು ನೀಡಿದೆ. ಕಳೆದ ವರ್ಷಕ್ಕೆ  ಹೋಲಿಸಿದರೆ ವ್ಯಾಪಾರ ಕೇಕಡ 50ರಷ್ಟು ಕುಸಿದಿದೆ ಎಂದು ಆಭರಣ ವ್ಯಾಪಾರಿಗಳು ಹೇಳಿದ್ದಾರೆ.

ಭಾರತದಲ್ಲಿ ಚುನಾವಣೆಯ ಅವಧಿ ಎರಡು ತಿಂಗಳು ವಿಸ್ತರಿಸಿರುವುದರಿಂದ ಚಿನ್ನ ಮತ್ತು ನಗದು ಸಾಗಾಣಿಕೆಯ ಮೇಲೆ ತೀವ್ರ ನಿಗಾ ವಹಿಸಿರುವುದು ಕೂಡಾ ಬೇಡಿಕೆ ಕುಸಿತಕ್ಕೆ ಮತ್ತು ನಗದು ಸಾಗಾಣಿಕೆಯ ಮೇಲೆ ತೀವ್ರ ನಿಗಾ ವಹಿಸಿರುವುದು ಕೂಡಾ ಬೇಡಿಕೆ ಕುಸಿತಕ್ಕೆ ಪ್ರಮುಖ ಕಾರಣ ಎಂದು  ವಿಶ್ಲೇಷಿಸಲಾಗಿದೆ

   

Related Articles

error: Content is protected !!