ಕೋಟ : ಗೋಳಿಗರಡಿ ಕ್ಷೇತ್ರ ಒಂದು ಪುರಾತನ ದೈವಶಕ್ತಿ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ ಎಂದು ಶಂಕರಪುರ ಸಾಯಿಬಾಬಾ ಮಂದಿರದ ಈಶ್ವರ್ ಸಾಯಿ ಹೇಳಿದರು.
ಸಾಸ್ತಾನದ ಗೋಳಿಗರಡಿ ಪಂಜುರ್ಲಿ ಪರಿವಾರ ದೈವಸ್ಥಾನಕ್ಕೆ ಭೇಟಿ ನೀಡಿ ಮಾನತಾಡಿ ದೈವ ಕ್ಷೇತ್ರಗಳು ತನ್ನದೆ ಆದ ಕಂಪನ ಬೀರುವ ಶಕ್ತಿ ಪೀಠಗಳಾಗಿ ಭಕ್ತಸಮುದಾಯವನ್ನು ವಿಶೇಷವಾಗಿ ಸಂದರ್ಶಿಸುವಂತೆ ಮಾಡುತ್ತಿದೆ,
ಹಿಂದೂ ಧರ್ಮದ ರಕ್ಷಣೆಗಾಗಿ ಹಲವಾರು ಕ್ಷೇತ್ರಗಳನ್ನು ಸಂದರ್ಶಿಸುತ್ತಿದ್ದೇನೆ,ಅದೇ ರೀತಿ ನನ್ನ ಈ ದಿಢೀರ್ ಭೇಟಿಯು ಅದೇ ರೀತಿ ಸೆಳೆದಿದೆ ಎಂದರು.
ಇದೇ ವೇಳೆ ದೈವಸ್ಥಾನದ ಆಡಳಿತ ಮಂಡಳಿ ವತಿಯಿಂದ ಶ್ರೀಗಳನ್ನು ಗೌರವಿಸಲಾಯಿತು.
ದೈವಸ್ಥಾನದ ಪಾತ್ರಿ ಜಿ.ಶಂಕರ್ ಪೂಜಾರಿ,ದೈವಸ್ಥಾನದ ಅಧ್ಯಕ್ಷ ಜಿ.ವಿಠ್ಠಲ್ ಪೂಜಾರಿ,ಶ್ರೀಮತಿಜಾನಕಿ ವಿಠ್ಠಲ್ ಪೂಜಾರಿ, ಪ್ರಮುಖರಾದ ಶಂಕರ್ ಕುಲಾಲ್,ಗಣಪಯ್ಯ ಆಚಾರ್,ಲೀಲಾವತಿ ಗಂಗಾಧರ್, ರತ್ನಾ ಜೆ ರಾಜ್,ರಾಘವೇಂದ್ರ ಪೂಜಾರಿಓಣಿಮನೆ,ಪಂಜು ಪೂಜಾರಿ,ಆನಂದ ಪೂಜಾರಿ,ಶೀನ ಪೂಜಾರಿ,ಸಕು ಪೂಜಾರಿ,ಬಿಲ್ಲವ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ,ಮನೋಜ್ ಪೂಜಾರಿ,ಕುಸುಮಾ ಎಂ ಪೂಜಾರಿ,ಲಕ್ಷö್ಮಣ ಪೂಜಾರಿ, ಪಾಂಡೇಶ್ವರ ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ ಗಣಪ ಪೂಜಾರಿ ಪಾಂಡೇಶ್ವರ,ಸೇರಿದAತೆ ಗಣ್ಯರು ಉಪಸ್ಥಿತರಿದ್ದರು.ಬಿಲ್ಲವ ಸಂಘದ ಗಣೇಶ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು

