ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ, ಕಾಸರಗೋಡು ಪೆರ್ಲ ನಿವಾಸಿ ಗೋಪಾಲ ಚೆಟ್ಟಿಯಾರ್ (78 ವರ್ಷ) ಮಂಗಳವಾರ ನಸುಕಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಮೂಲತಃ ಪೆರ್ಲ ನಿವಾಸಿಯಾದ ಅವರು ಬಂದೊಡುವಿನಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಆರ್ಎಸ್ಎಸ್ನ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್, ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಹಾಗೂ ಮಂಗಳೂರು ವಿಭಾಗ ಸಂಘಚಾಲಕ್ರಾಗಿ ಸೇವೆ ಸಲ್ಲಿಸಿದ್ದ ಅವರು, ಅಪಾರ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು.ಕೇರಳ ಕಂದಾಯ ಇಲಾಖೆಯಲ್ಲಿ 35 ವರ್ಷಗಳ ಕಾಲ ಸುದೀರ್ಘ ಕಾರ್ಯನಿರ್ವಹಿಸಿದ ಗೋಪಾಲ್ ಚೆಟ್ಟಿಯಾರ್ ಅವರು 2002ರಲ್ಲಿ ಉಪ ತಹಶೀಲ್ದಾರ್ರಾಗಿ ಸೇವೆಯಿಂದ ನಿವೃತ್ತರಾಗಿದ್ದರು. ಬಳಿಕ ಅವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜ ಸೇವೆಗಾಗಿಯೇ ಮೀಸಲಿರಿಸಿದ್ದರು. ಆರ್ ಎಸ್ ಎಸ್ನಲ್ಲಿ ದಕ್ಷಿಣ ಮಧ್ಯಕ್ಷೇತ್ರೀಯ ಸೇವಾ ಪ್ರಮುಖ್, ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಹಾಗೂ ಮಂಗಳೂರು ವಿಭಾಗ ಸಂಘಚಾಲಕರಾಗಿದ್ದರು