ಬೈಂದೂರು: ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಸೋಮವಾರ ಕರಾವಳಿ ಭಾಗದ ಉಪ್ಪುಂದದ ಅಳ್ವೆಕೋಡಿಯಿಂದ ಕರ್ಕಿಕಳಿಯವರೆಗೆ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಬಳಿಕ ಮಾತನಾಡಿದ ಅವರು, ಈ ಬಾರಿ 30 ಸಾವಿರಕ್ಕೂ ಅಧಿಕ ಅಂತರದಿಂದ ಗೆಲ್ಲುತ್ತೇನೆ. ಶಾಸಕನಾಗಿದ್ದಾಗ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಲೇ ಬಂದಿದೆ. ಈ ಭಾಗದ ಜನ ಗೋಪಾಲ ಪೂಜಾರಿಯನ್ನು ಗೆಲ್ಲಿಸಬೇಕೆಂಬ ಛಲವನ್ನು ಇಟ್ಟುಕೊಂಡಿದ್ದಾರೆ. ನಾನು ಎಲ್ಲಾ ಜಾತಿ, ಧರ್ಮದ ಜನರೊಂದಿಗೆ ಸೇವೆ ನೀಡುವ ಕಾರ್ಯ ನಮ್ಮ ಕಾಂಗ್ರೆಸ್ ಸರಕಾರ ಬರುತ್ತದೆ. ನಿಮ್ಮೆಲ್ಲರಿಗೂ ನೀಡಿದ ಗ್ಯಾರೆಂಟ್ ಕಾರ್ಡ್ನ ಸೌಲಭ್ಯವನ್ನು ನಾವು ನಮ್ಮ ಸರಕಾರ ಖಂಡಿತಾ ಈಡೇರಿಸುತ್ತೇವೆ. ಮೀನುಗಾರರಿಗೆ 300 ಲೀಟರ್ ಸೀಮೆ ಎಣ್ಣೆಯನ್ನು ಬಜೆಟ್ನಲ್ಲಿ ಘೋಷಣೆ ಮಾಡುತ್ತೇವೆ ಎಂದರು.