ಕುಂದಾಪುರ : ನಗರದ ಸರಕಾರಿ ಅಸ್ಪತ್ರೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿ ಅಗಲಿರುವ ದಿ। ವಿಜಯಾ ಬಾಯಿ ಅವರ ಹೆಸರಿನಲ್ಲಿ ಅವರ ಪತಿ ಕುಂದಾಪುರ ಪುರಸಭೆಯ ಮಾಜಿ ಸದಸ್ಯ ಶಿವರಾಮ ಪುತ್ರನ್ ಮತ್ತು ಮಕ್ಕಳು ನೀಡಿದ 20 ಲಕ್ಷ ರೂಪಾಯಿಗಳ ದೇಣಿಗೆಯಲ್ಲಿ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಉತ್ತಮ ಗುಣಮಟ್ಟದಲ್ಲಿ ವ್ಯವಸ್ಥಿತ ಕಟ್ಟಡ ನಿರ್ಮಿಸಲಾಗಿದ್ದು ನಾಳೆ ಈ ಕಟ್ಟಡದಲ್ಲಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಸೇವಾ ಕೇಂದ್ರವನ್ನು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗೂಂಡುರಾವ್ರವರು ಉದ್ಘಾಟಿಸಲಿದ್ದಾರೆ
ನಾಳೆ ನಗರದ ಸರಕಾರಿ ಆಸ್ಪತ್ರೆಯ ವಠಾರದಲ್ಲಿ ನಡೆಯುವ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಶಾಸಕರು ಸಂಸದರು ಹಾಗೂ ಉಸ್ತುವಾರಿ ಸಚಿವರು ಮತ್ತು ಅಧಿಕಾರಿ ವರ್ಗದವರು ಪಾಲ್ಗೋಳ್ಳಲಿದ್ದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಇದೇ ಸಂದರ್ಭದಲ್ಲಿ ಕುಂದಾಪುರ ಪುರಸಭೆಯ ಮಾಜಿ ಸದಸ್ಯರಾದ ಶಿವರಾಮ ಪುತ್ರನ್ ರವರು ಸನ್ಮಾನಗೊಳ್ಳಲಿದ್ದಾರೆ
ಈ ಸೇವಾ ಕೇಂದ್ರದಲ್ಲಿ ಮಾತಿನ ತಜ್ಞರು, ಕಿವುಡುತನ ಪರೀಕ್ಷಕರು ಹಾಗೂ ಒಬ್ಬರು ತರಬೇತಿ ಅವಧಿಯ ವೈದ್ಯರು ಸೇರದಂತೆ ಮೂವರು ನೂತನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ