Home » ವನಮಹೋತ್ಸವ ಅಂಗವಾಗಿ ಗಿಡ ವಿತರಣೆ
 

ವನಮಹೋತ್ಸವ ಅಂಗವಾಗಿ ಗಿಡ ವಿತರಣೆ

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

by Kundapur Xpress
Spread the love

ಉಡುಪಿ : ಜಿಲ್ಲಾ ಗೃಹರಕ್ಷಕದಳ ಉಡುಪಿ ಜಿಲ್ಲೆ, ಕಾಪು ಮತ್ತು ಪಡುಬಿದ್ರಿ ಘಟಕ, ಸರಸ್ವತಿ ಮಂದಿರ ಶಾಲೆ, ಉಚ್ಚಿಲ ಇವರ ಜಂಟಿ ಆಶ್ರಯದಲ್ಲಿ  ಸರಸ್ವತಿ ಮಂದಿರ ಶಾಲೆಯಲ್ಲಿ ವನಮಹೋತ್ಸವ ಅಂಗವಾಗಿ ನಡೆದ “ಗಿಡಗಳು ನೆಡುವ ಮತ್ತು ವಿತರಣಾ ಕಾರ್ಯಕ್ರಮ”ದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಗಿಡಗಳ ವಿತರಣೆ ಮಾಡಿದ ಅವರು ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಠರಾದ ಡಾll. ಪ್ರಶಾಂತ್ ಶೆಟ್ಟಿ, ಕಾಪು ಪೋಲಿಸ್ ವೃತ್ತ ನಿರೀಕ್ಷಕರಾದ ಕೆ.ಸಿ ಪೂವಯ್ಯ, ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕದಳ ಡೆಪ್ಯೂಟಿ ಕಮಾಂಡೆಟ್ ರಮೇಶ್, ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಇಂದಿರಾ ಶೆಟ್ಟಿ, ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಸಂಚಾಲಕರಾದ ಗಂಗಾಧರ ಸುವರ್ಣ, ಪೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಬಾಬುರಾಯ ಆಚಾರ್ಯ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಲಕ್ಷ್ಮೀ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಕೇಸರಿ ಯುವರಾಜ್, ಕಾಪು ಗೃಹರಕ್ಷಕ ದಳದ ಘಟಕಾಧಿಕಾರಿಗಳಾದ ಕುಮಾರ್ ವಿ ಕೋಟ್ಯಾನ್, ಪಡುಬಿದ್ರಿ ಗೃಹರಕ್ಷಕ ದಳದ ಘಟಕಾಧಿಕಾರಿಗಳಾದ ನವೀನ್ ಕುಮಾರ್ ಉಪಸ್ಥಿತರಿದ್ದರು

   

Related Articles

error: Content is protected !!