ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದಲ್ಲಿ ಬುಧವಾರ ವಿಟ್ಲಪಿಂಡಿಯನ್ನು ಸಂಭ್ರಮದಿAದ ಆಚರಿಸಲಾಯಿತು. ಆ ಪ್ರಯುಕ್ತ ಶ್ರೀದೇವರು ಪಲ್ಲಕಿ ಉತ್ಸವ ಮೆರವಣಿಗೆಯಲ್ಲಿ ಮೊಸರು ಕುಡಿಕೆಗಳನ್ನ ಒಡೆಯುತ್ತ ಯಡಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಗ್ರಾಮಸ್ಥರಿಂದ ಪೂಜೆಯನ್ನು ಸ್ವೀಕರಿಸಿ ಶ್ರೀ ಆಂಜನೇಯ ದೇವಳಕ್ಕೆ ಬಂದು ಅಲ್ಲಿ ಅಷ್ಟಾವಧಾನ ಪೂಜೆ ಪೂರೈಸಿ ನಂತರ ಶ್ರೀ ದೇವಳಕ್ಕೆ ಹಿಂತಿರುಗಲಾಯಿತು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ ಕೆ. ಎಸ್ ಕಾರಂತ, ಕಾರ್ಯದರ್ಶಿ ಲಕ್ಷಿ÷್ಮÃನಾರಾಯಣ ತುಂಗ, ಕೂ. ಮ. ಜ ಸಾಲಿಗ್ರಾಮ ಅಂಗಸAಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಮತ್ತು ಪದಾಧಿಕಾರಿಗಳು ಗ್ರಾಮಮೋಕ್ತೇಸರರು ಹಾಗು ಮತ್ತಿತ್ತರು ಉತ್ಸವದಲ್ಲಿ ಪಾಲ್ಗೊಂಡರು.