ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ
ಇಂದು ಜುಲೈ 3 ನೇ ತಾರೀಖನ್ನು ಭಾರತ ಮತ್ತು ನೇಪಾಳದಲ್ಲಿ ಗುರುಪೂರ್ಣಿಮೆಯಾಗಿ ಆಚರಿಸುತ್ತಾರೆ ಆಷಾಢ ಮಾಸದ ಹುಣ್ಣಿಮೆಯನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ ಇದನ್ನು ವ್ಯಾಸ ಪೂರ್ಣಿಮೆ ಎಂದು ಕೂಡ ಕರೆಯುತ್ತಾರೆ ಗುರುಪೂರ್ಣಿಮೆಗೆ ಹಿಂದೂ ಸಂಪ್ರದಾಯದಲ್ಲಿ ಮಹತ್ವವಾದ ಸ್ಥಾನಮಾನವಿದೆ ಯಾವುದೇ ಒಬ್ಬ ವ್ಯಕ್ತಿ ಯಶಸ್ಸನ್ನು ಸಾಧಿಸಬೇಕಾದರೆ ಅವನ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎನ್ನುವ ನಂಬಿಕೆಯಿದೆ ಗುರು ಇಲ್ಲದ ಜೀವನಕ್ಕೆ ಮತ್ತು ಜ್ಞಾನಕ್ಕೆ ಯಾವುದೇ ರೀತಿ ಅರ್ಥವಿಲ್ಲ ನಮ್ಮ ಅಜ್ಞಾನವನ್ನು ದೂರ ಮಾಡಿ ಸುಜ್ಞಾನದ ದಾರಿ ತೋರುವವರೇ ಗುರುಗಳು
“ಗುರುದೇವೋಭವ‘ ಇವುಗಳು ಬರೀ ಪದಗಳ ಸಾಲಲ್ಲ ಜೀವನದ ನಿತ್ಯ ಸತ್ಯ ನಮ್ಮಲ್ಲಿ ಗುರುಗಳಿಗೆ ಪರಮ ಪವಿತ್ರ ದೇವರ ಸ್ನಾನಮಾನವಿದೆ ತಂದೆ ತಾಯಿ ಗುರುಗಳು ಪ್ರತಿ ಒಬ್ಬರ ಜೀವನವನ್ನು ರೂಪಿಸುವ ಪ್ರಮುಖ ಶಕ್ತಿಗಳು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅರಿಯಲು ತಪ್ಪು ಸರಿ ಗಳನ್ನು ತಿಳಿದು ಸ್ವಯಂ ತೀರ್ಮಾನ ತೆಗೆದುಕೊಳ್ಳಲು ಸಹಾಯಕರಾಗಿ ಬದುಕಿನ ಅರ್ಥವನ್ನು ಸಾಧಿಸುವ ಗುರಿಗಳನ್ನು ತೋರಿ ಮಾರ್ಗದರ್ಶಕರಾಗಿ ಎಲ್ಲರ ಬಾಳಲ್ಲೂ ಒಬ್ಬರು ಗುರುಗಳು ಇರುತ್ತಾರೆ ಅಂತಹ ಎಲ್ಲಾ ಗುರುಗಳು ಪೂಜ್ಯನೀಯರು
ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಗುರು ಪ್ರಮುಖ ಸ್ಥಾನದಲ್ಲಿ ಇರುತ್ತಾರೆ ಕತ್ತಲೆಯನ್ನು ದೂರ ಮಾಡಿ ಚಿಂತನೆಯ ಬೆಳಕು ಹರಿಸಿ ರಾಷ್ಟ್ರ ಪ್ರೇಮ ಬೆಳಸಿ ನಮ್ಮ ಜೀವನಕ್ಕೆ ದಾರಿದೀಪರಾಗಿ ಹಗಲು ರಾತ್ರಿ ನಮ್ಮ ಯಶಸ್ವಿಗೆ, ಏಳಿಗೆ ಶ್ರಮಿಸಿದ ಕಾಯಕಯೋಗಿ ಗುರುವಿಗೆ ನಮೋ ನಮೋ ಉತ್ತಮ ಸಂಕಲ್ಪದೊಂದಿಗೆ ಮುಂದೆ ಸಾಗೋಣ ಗುರುವಿನ ಕೃಪೆಗೆ ಒಳಗಾಗೋಣ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಶಕ್ತಿ ಜ್ವಾಲಾಮುಖಿ ತರ ಚಿಮ್ಮುವಂತೆ ನಮ್ಮನ್ನು ಬೆಳಸಿದ ಎಲ್ಲಾ ಗುರುಗಳಿಗೂ ವಂದನೆಗಳು ಮತ್ತೊಮ್ಮೆ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು
✍ಈಶ್ವರ್ ಸಿ ನಾವುಂದ