Home » ಹಿರಿಯ ನಾಗರಿಕರಿಗೆ 5 ಲಕ್ಷ ವರೆಗಿನ ಚಿಕಿತ್ಸಾ ವೆಚ್ಚ ಒದಗಿಸುವ ವಯೋ ವಂದನ ಯೋಜನೆ
 

ಹಿರಿಯ ನಾಗರಿಕರಿಗೆ 5 ಲಕ್ಷ ವರೆಗಿನ ಚಿಕಿತ್ಸಾ ವೆಚ್ಚ ಒದಗಿಸುವ ವಯೋ ವಂದನ ಯೋಜನೆ

ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದ ಶಾಸಕ ಗುರುರಾಜ್ ಗಂಟಿಹೊಳೆ

by Kundapur Xpress
Spread the love

ಬೈಂದೂರು: ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಭಾರತ ಸರಕಾರದ ವಯೋ ವಂದನಾ ಯೋಜನೆಯಡಿಯಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಾಜ್ಯ ಸರಕಾರ ತನ್ನ ಪಾಲಿನ ಶೇ. 40 ಅನುದಾನ ಒದಗಿಸುವ ಸಂಬಂಧ ಅನುಮೋದನೆ ನೀಡಿರದ ಕಾರಣ ರಾಜ್ಯದಲ್ಲಿ ಸದರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು ತಕ್ಷಣವೇ ಅನುದಾನ ಒದಗಿಸಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದರು.
ರಾಜ್ಯ ಸರಕಾರ ಆಯುಷ್ ಮಾನ್ ಯೋಜನೆಯ ಮಾನದಂಡ ದಂತೆ ರಾಜ್ಯದಲ್ಲಿರುವ ಹಿರಿಯ ನಾಗರಿಕರ ಪ್ರಸ್ತುತ ಪರಿಸ್ಥಿತಿ ಯ ಬಗ್ಗೆ ವಿವರಿಸಿ ಅವರ ಆರೋಗ್ಯದ ಹಕ್ಕನ್ನು ಸಂರಕ್ಷಣೆ ಮಾಡಲು ಅಗತ್ಯ ಕ್ರಮ ವಹಿಸಲು ಒತ್ತಾಯಿಸಿದ್ದರು.
ಅದರಂತೆ ಪ್ರಸ್ತುತ ಸೆ. 17ರ ಸರಕಾರಿ ಆದೇಶದಂತೆ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ಹಿರಿಯ ನಾಗರಿಕರಿಗೆ ಆಯುಷ್ ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸಿ ಕೇಂದ್ರ ಸರಕಾರದ ವಯೋ ವಂದನಾ ಯೋಜನೆಯ ಮಾರ್ಗ ಸೂಚಿಗಳ ಪ್ರಕಾರ ಹಾಗೂ ಭಾರತ ಸರಕಾರದ ಅನುಮೋದನೆಯ ಷರತ್ತಿಗೊಳಪಟ್ಟು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಜ್ಯ ಸರಕಾರದ ಈ ಕ್ರಮದ ಬಗ್ಗೆ ಬೈಂದೂರು ಶಾಸಕರು ಹರ್ಷ ವ್ಯಕ್ತ ಪಡಿಸಿದ್ದಾರೆ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ

ವಯೋ ವಂದನ ಯೋಜನೆಯು ಅಸ್ತಿತ್ವದಲ್ಲಿರುವ ABRK ಯೋಜನೆಯ ಸೌಲಭ್ಯ ಗಳನ್ನು ಹಿರಿಯ ನಾಗರಿಕರಿಗೆ ಅವರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೇ ವಿಸ್ತರಿಸುವ ಅಂಶ ಗಳು ಸೇರಿದಂತೆ ಇನ್ನಿತರ ಅಂಶ ಗಳನ್ನು ಒಳಗೊಂಡಿದೆ. 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವರ್ಷಕ್ಕೆ ರೂ. 5 ಲಕ್ಷದವರೆಗೆ ಹಂಚಿ ಕೊಳ್ಳುವ ವಿಮಾ ಆವರಣ (Shared cover) ಲಭ್ಯವಿರುತ್ತದೆ. ಹಾಗೂ ನೋಂದಣಿಗೆ ಅಗತ್ಯ ವಿರುವ ಏಕೈಕ ದಾಖಲೆ ಯಾದ ಅವರ ಆಧಾರ್ ಕಾರ್ಡ್ ಮೂಲಕ ಈ ವಯಸ್ಸನ್ನು ಪರಿಶೀಲಿಸಲಾಗುತ್ತದೆ.

 

Related Articles

error: Content is protected !!