Home » ಗುರುಕುಲ : ವಿದ್ಯಾರ್ಥಿ ಸಂಸತ್ ಪದಗ್ರಹಣ
 

ಗುರುಕುಲ : ವಿದ್ಯಾರ್ಥಿ ಸಂಸತ್ ಪದಗ್ರಹಣ

by Kundapur Xpress
Spread the love

ಕೋಟೇಶ್ವರ :  2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭವು ವಕ್ವಾಡಿಯ ಗುರುಕುಲ ಶಾಲೆಯಲ್ಲಿ ವಿಜೃಂಭಣೆಯಿಂದ ಜರುಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಟರಿ ಸೆಂಟೆನಿಯಲ್ ಗವರ್ನರ್ ಶ್ರೀ ಎ.ಎಸ್.ಎನ್ ಹೆಬ್ಬಾರ್ ಅವರು ಶಾಲಾ ಧ್ವಜಾರೋಹಣ ನೆರವೇರಿಸಿ, ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ವಿನಯತೆಯ ಮಹತ್ವದ ಕುರಿತು ಮಾತನಾಡಿದರು. ತಮ್ಮ ಜೀವನ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಅವರಲ್ಲಿ ಉತ್ಸಾಹ ತುಂಬಿಸಿದರು.

ಕಾರ್ಯಕ್ರಮವು ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು, ಶಾಲಾ ಬ್ಯಾಂಡ್‌ನ ಸಡಗರಭರಿತ ಸಂಗೀತದೊಂದಿಗೆ ಧ್ವಜಾರೋಹಣ ನಡೆಯಿತು. ನಂತರ ವಿದ್ಯಾರ್ಥಿನಿಯರು ನೃತ್ಯ ಪ್ರಸ್ತುತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಜಂಟಿ ಕಾರ್ಯಾನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್. ಶೆಟ್ಟಿ,  ಮಾತನಾಡಿ, ನಾಯಕತ್ವ ಹಾಗೂ ಶಿಷ್ಟ ನಡವಳಿಕೆಗೆ ಪಠ್ಯೇತರ ಚಟುವಟಿಕೆಗಳ ಪಾತ್ರವನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶಾಲಾ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ವಿದ್ಯಾರ್ಥಿ ಸಂಸತ್ ಕಾರ್ಯಚಟುವಟಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿ, ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ತಿಳಿಸಿದರು.

2025-26 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕನಾಗಿ ಮಾಸ್ಟರ್ ಶಶಾಂಕ್ ಯು.ಕೆ,ವಿದ್ಯಾರ್ಥಿ ನಾಯಕಿಯಾಗಿ ಕುಮಾರಿ ಅವನಿ ಸುರೇಶ್ ಮತ್ತು ಶಾಲಾ ಸಂಸತ್ ಸ್ಪೀಕರ್ ಆಗಿ ಕುಮಾರಿ ಸನ್ಮತಿ,ವಿರೋಧ ಪಕ್ಷದ ನಾಯಕರಾಗಿ,ಮಾಸ್ಟರ್ ಅನ್ವೇಶ್ ಪೂಜಾರಿ ಮತ್ತು ಕುಮಾರಿ ವಿದ್ಯಾವತಿ ಆಯ್ಕೆಯಾದರು.

ಶಾಲಾ ವಿದ್ಯಾರ್ಥಿಗಳ ನಾಲ್ಕು ತಂಡಗಳಾದ ರಾಮನ್, ಕಲ್ಪನಾ ,ಕಲಾಂ ಮತ್ತು ಆರ್ಯಭಟದ ಪದಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಲಾಯಿತು. ಈ ಸಂದರ್ಭಕ್ಕೆ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಕ್ಷಿಯಾದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಸುಮಲತಾ ನಿರೂಪಿಸಿ, ಪ್ರಿಯಾಂಕಾ ಸ್ವಾಗತಿಸಿದರು.ಅತಿಥಿ ಪರಿಚಯವನ್ನು ಸಹಶಿಕ್ಷಕಿ ಸಹನಾ ಶೆಟ್ಟಿ ಮಾಡಿದರು.

 

Related Articles

error: Content is protected !!