ಕೋಟ : ಕೋಡಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿಯವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯಪಡೆ ಸದಸ್ಯರಿಗೆ ಗಾಮ್ರ ಆರೋಗ್ಯ ಅಭಿಯಾನ ತರಬೇತಿ ಕಾರ್ಯಕ್ರಮ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಜರುಗಿತು. ಸಮುದಾಯ ಆರೋಗ್ಯ ಇಲಾಖೆ ಬ್ರಹ್ಮಾವರ ಆರೋಗ್ಯಾಧಿಕಾರಿ ರೋಹನ್ ಕ್ಷಯರೋಗ, ಬಿಪಿ, ಹಾಗೂ ಡಯಾಬಿಟಿಸ್ ರೋಗಗಳÀ ಬಗ್ಗೆ ಮಾಹಿತಿಯನ್ನು ನೀಡಿದರು.
ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀ ವಿವಾಹದ ಬಗ್ಗೆ ಮಾಹಿತಿಯನ್ನು ನೀಡಿದರು.
ಕೆನರಾ ಬ್ಯಾಂಕ್ ಸಾಸ್ತಾನ ಅಧಿಕಾರಿ ದೀಪಿಕಾ ಕೃಷ್ಣ ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಬಗ್ಗೆ ಹಾಗೂ ಇತರೆ ವಿಷಯಗಳ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ ಮೆಂಡನ್, ಸತೀಶ್ ಜಿ ಕುಂದರ್, ಕೃಷ್ಣ ಪೂಜಾರಿ ಪಿ, ಮಂದರ್ ಸಂಸ್ಥೆ ಸಿಎಫ್‌ಎಲ್ ಉಡುಪಿ ಅರ್ಪಿತಾ, ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕೋಡಿ ಕನ್ಯಾಣ ಸಮುದಾಯ ಆರೋಗ್ಯಅಧಿಕಾರಿ ಪರಸಪ್ಪ ದೊಡ್ಡಮನಿ, , ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಅವಿತಾ, ಕೆನರಾ ಬ್ಯಾಂಕ್ ಸಾಸ್ತಾನ ಸಿಬ್ಬಂದಿ ತಾರಾ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಎಸ್‌ಎಲ್‌ಆರ್‌ಎಮ್ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ರವೀಂದ್ರ ರಾವ್ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ ನಿರ್ವಹಿಸಿದರು.